Uncategorized

ಹೂನೂರ ಶ್ರೀ ವಿಠ್ಠಲ ದೇವರ ಅದ್ದೂರಿ ಭಂಡಾರ ಜಾತ್ರೆ

Share

ಹುಕ್ಕೇರಿ ತಾಲೂಕಿನ ಹೂನೂರ ಗ್ರಾಮದ ಶ್ರೀ ವಿಠ್ಠಲ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ಪ್ರತಿ ವರ್ಷ ವಿಜಯ ದಶಮಿಯ ಎಂಟನೆಯ ದಿನ ಜಾಗರಣೆ ಮಾಡುವ ಮೂಲಕ ಇಡಿ ರಾತ್ರಿ ಬೆಳಗಾವಿ ಜಿಲ್ಲೆಯ ವಿವಿಧ ನಗರ ಗಳಿಂದ ಆಗಮಿಸಿದ ಡೋಳ್ಳು ಬಾರಿಸುವ ತಂಡಗಳಿಂದ ಸ್ಪರ್ಧೆ ಜರುಗಿದವು.
ಬೆಳಗಿನ ಜಾವ ಶ್ರೀ ವಿಠ್ಠಲ ದೇವರ ಪಲ್ಲಕ್ಕಿ ಉತ್ಸವ ಜರಗುವ ಸಂಧರ್ಬದಲ್ಲಿ ಸಾವಿರಾರು ಜನ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಂಡಾರ ಹಾರಿಸಿ ದೇವರ ಮೊರೆ ಹೋಗುತ್ತಾರೆ. ಇಡೀ ದೇವಸ್ಥಾನದ ಆವರಣ ಭಂಡಾರದಿಂದ ತುಂಬಿ ತುಳುಕುತ್ತದೆ.
ನಂತರ ದೇವಸ್ಥಾನದ ಅರ್ಚಕರು ಕಾರ್ಣಿಕೆ ಹೇಳುವ ಮೂಲಕ ದೇಶದಲ್ಲಿ ಆಗು ಹೋಗುವಗಳ ಬಗ್ಗೆ ಭವಿಷ್ಯ ನುಡಿದರು.
ಈ ಕುರಿತು ಇನ್ ನ್ಯೂಜ ಜೋತೆ ಮಾತನಾಡಿದ ದೇವಸ್ಥಾನದ ಮುಖ್ಯಸ್ಥ ಗೊಕಾಕದ ಪುಂಡಲೀಕ ಮೇಟಿ ಕಳೆದ ನೂರಾರು ವರ್ಷ ಇತಿಹಾಸ ಹೊಂದಿದ ಈ ಮಂದಿರ, ಈ ವರ್ಷ ಮಳೆ ಅಭಾವದಿಂದ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ ನಾಡಿನ ಸುಭಿಚ್ಚೆಗೆ ವಿಠ್ಠಲ ದೇವರು ಸರ್ವರಿಗೂ ನಿಸರ್ಗದ ಕೊಡುಗೆ ಅಪಾರವಾಗಿರಲಿ . ದೇವಸ್ಥಾನದ ಅಭಿವೃದ್ಧಿ ಹೊಂದುತ್ತಲಿದೆ ಇದಕ್ಕೆ ಸಹಕರಿಸುತ್ತಿರುವ ಭಕ್ತರಿಗೆ ಪಂಚ ಕಮೀಟಿ ವತಿಯಿಂದ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು

ಹಿಡಕಲ್ ಜಲಾಶಯದ ಹಿನ್ನಿರಿನ ವಿಶಾಲವಾದ ಸ್ಥಳದಲ್ಲಿ ಸ್ಥಾಪಿತಗೊಂಡ ಶ್ರೀ ವಿಠ್ಠಲ ಮಂದಿರ ಉತ್ತರ ಕರ್ನಾಟಕದಲ್ಲೆ ಜಾಗ್ರತ ದೇವಸ್ಥಾನ ವಾಗಿದೆ, ಕಳೆದ ಆರು ವರ್ಷದಿಂದ ದೇವಾಲಯದ ಕಟ್ಟಡದ ಕೆತ್ತನೆ ಕಾಮಗಾರಿ ಭರದಿಂದ ಸಾಗಿದೆ ಇದಕ್ಕೆ ಭಕ್ತರ ಸಹಕಾರ ಅವಶ್ಯವಾಗಿದೆ.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಭೀಮಪ್ಪಾ ರಾಮಗೋನಟ್ಟಿ ಮಾತನಾಡಿ ಹುನೂರು ವಿಠ್ಠಲ ದೇವರ ಮೂಲ ಮಂದಿರ ಹಿಡಕಲ್ ಜಲಾಶಯದ ಹಿನ್ನಿರಿನಲ್ಲಿ ಮುಳುಗಡೆ ಹೊಂದಿದ ಮೇಲೆಈಗ ನೂತನ ಮಂದಿರ ಸ್ಥಾಪಿಸಲಾಗಿದೆ ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಈ ಸ್ಥಳ ಖಾಲಿ ಮಾಡುವಂತೆ ನೋಟಿಸ ನಿಡುತ್ತಿದ್ದಾರೆ ಇದರಿಂದ ಇಲ್ಲಿ ನೆಲೆಸಿರುವ ಜನರ ಮನೆಗಳು ಹಾಗೂ ಭವ್ಯವಾದ ವಿಠ್ಠಲ ಮಂದಿರ ತೇರವು ಗೋಳಿಸುವದು ಎಷ್ಟು ಸಮಂಜಸ ಕಾರಣ ಸರ್ಕಾರ ಈ ಸ್ಥಳವನ್ನು ಬಿಟ್ಟು ಕೊಡುವದು ಅವಶ್ಯಕವಾಗಿದೆ ಎಂದರು
ಈ ಸಂಧರ್ಬದಲ್ಲಿ ಶ್ರೀ ವಿಠ್ಠಲ ದೇವರ ಪಂಚ ಕಮೀಟಿ ಸದಸ್ಯರು, ಸದ್ಭಕ್ತ ಮಂಡಳಿ ಹಾಗೂ ಅಪಾರ ಭಕ್ತರು ಉಪಸ್ಥಿತರಿದ್ದರು.
ನಂತರ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಜನ ಭಕ್ತರು ಉಪಸ್ಥಿತರಿದ್ದು ದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು.

Tags: