: ಭಾರತೀಯ ಸಂಸ್ಕ್ರತಿಯಲ್ಲಿ ಹಬ್ಬ ಹರಿದಿನಗಳು ಎಲ್ಲರನ್ನು ಒಂದು ಮಾಡಿ ಅವರಲ್ಲಿ ಸಾಮರಸ್ಯದ ಬೆಸುಗೆ ಹಾಕಿ ನಮ್ಮ ದೇಶಿಯ ಸಂಸ್ಕೃತಿಯನ್ನ ಎತ್ತಿ ಹಿಡಿಯುವಲ್ಲಿ ಹಬ್ಬಗಳ ಪಾತ್ರ ಹಿರಿದಾದದ್ದು ಹಾಗೆಯೆ ದಸರಾ ಉತ್ಸವ ನಮ್ಮಲ್ಲಿರುವ ಅಸುರೀ ಗುಣಗಳು ಹೋಗಿ ದೈವಿ ಗುಣಗಳು ಬರುವ ಹಾಗೆ ಮಾಡುವಂತಹ ಅಪರೂಪದ ಹಬ್ಬವಾಗಿದೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ರಾಜ್ಯ ಹೊರರಾಜ್ಯ ಹೊರದೇಶದಿಂದಲೂ ಕೂಡಾ ಜನರನ್ನು ಕರೆಸುವ ಮುಖಾಂತರ ನಮ್ಮ ಜನರಿಗೆ ಪರಿಚಯಸುವ ಕೆಲಸ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಆದ್ಯಾತ್ಮ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು .
ಸಾನಿಧ್ಯ ವಹಿಸಿ ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡುತ್ತಾ ಜನರಿಗೆ ಹೊಸದೇನಾದರೂ ಕೊಡಬೇಕು ನಮ್ಮ ಜನ ಎಲ್ಲವನ್ನು ನೋಡಬೇಕು ಎನ್ನುವ ಅಭಿಲಾಷೆಯಿಂದ ಸಾಕಷ್ಟು ಪರಿಶ್ರಮ ಪಟ್ಟು ಶ್ರೀ ಷ ಬ್ರ ಚಂದ್ರಶೇಖರ ಶ್ರೀಗಳು ವಿನೂತನ ಕಾರ್ಯಕ್ರಮವನ್ನು ಮಾಡುತ್ತಾ ಬಂದಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು .
ಆದ್ಯಾತ್ಮ ಪ್ರವಚನವನ್ನು ನೀಡಿದ ಮಾತೋಶ್ರೀ ಪಾರ್ವತಿ ದೇವಿ ಮಾತನಾಡುತ್ತಾ ಧ್ಯಾನ ,ಭಜನೆ ,ಸತ್ಸಂಗಗಳು ನಮ್ಮಲ್ಲಿರುವ ದುರ್ಗುಣಗಳನ್ನು ಹೊಡೆದೋಡಿಸುತ್ತವೆ ಅದಕ್ಕಾಗಿ ನಾವು ಪೂಜೆ ಪಾರಾಯಣವನ್ನು ಮಾಡಬೇಕು ಎಂದರು .
ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು ,
ಆರ್ ಕೆ ಹುಕ್ಕೇರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಣ್ಣ ಹುಕ್ಕೇರಿ ಮಾತನಾಡಿ ನಾವೆಲ್ಲ ಇಷ್ಟು ಬೆಳೆದು ನಿಂತಿದ್ದೇವೆ ಎಂದರೆ ಇದರ ಹಿಂದೆ ಹುಕ್ಕೇರಿ ಹಿರೇಮಠದ ಗುರುಗಳ ಆಶೀರ್ವಾದ ಇದೆ ಎಂದರು
ಈ ಸಂದರ್ಭದಲ್ಲಿ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ,ಮಹಾವೀರ ಭಾಗಿ ,ಪರಗೌಡ ಪಾಟೀಲ ಉಪಸ್ಥಿತರಿದ್ದರು
ಸಿ ಎಂ ದರಬಾರೆ ಕಾರ್ಯಕ್ರಮವನ್ನು ನಿರೂಪಿಸಿದರು .
Uncategorized
ಹಬ್ಬಗಳು ನಮ್ಮ ಮನಸ್ಸನ್ನ ಅರಳಿಸುತ್ತವೆ ಸಂಸದ ಅಣ್ಣಾಸಾಹೇಬ ಜೊಲ್ಲೆ
