ಶ್ರೀ ಷ ಬ್ರ ತಪೋಭೂಷಣ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಗುರುಗಡದೇಶ್ವರ ಸಂಸ್ಥಾನ ಹಿರೇಮಠ ಕಟಕೋಳ ಎಂ ಚಂದರಗಿ ಇವರ ಹುಟ್ಟುಹಬ್ಬವನ್ನ ಬೆಂಗಳೂರು ಮಹಾನಗರದ ಚಿಕ್ಕಪೇಟೆಯಲ್ಲಿರುವ ಮಹಾಂತಿನ ಮಠ ಗುರುಕುಲದಲ್ಲಿ ಆಚರಿಸಲಾಯಿತು
ಸುಮಾರು ೬೫ ಜನ ಸಾಧಕರಿಗೆ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ವಸ್ತ್ರವನ್ನ ಸನ್ಮಾನಿಸಿ ಕಟಕೋಳ ಎಂ ಚಂದರಗಿ ಶ್ರೀಗಳ ಹುಟ್ಟುಹಬ್ಬವನ್ನ ಆಚರಿಸಿದರು,
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಕಟಕೋಳ ಎಂ ಚಂದರಗಿ ಹಿರೇಮಠದ ಶ್ರೀ ಷ ಬ್ರ ತಪೋಭೂಷಣ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರು ತಪಸ್ವಿಗಳು ಅಷ್ಟೇ ಅಲ್ಲದೆ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ ಪರಮ ಶಿಷ್ಯರು ಇವತ್ತು ಅವರ ಹುಟ್ಟುಹಬ್ಬವನ್ನ ಬೆಂಗಳೂರು ಮಹಾನಗರದ ಮಹಾಂತಿನ ಮಠ ಗುರುಕುಲದಲ್ಲಿ ಆಚರಿಸುವ ಮೂಲಕ ಗುರುಗಳು ಮಾಡುವ ಕಾರ್ಯಕ್ಕೆ ರೇಣುಕಾಚಾರ್ಯರು ಭದ್ರಕಾಳಿ ಸಮೇತ ವೀರಭದ್ರೇಶ್ವರರು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿತ್ತೇವೆ ಎಂದರು
ಈ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿ ಹಿರೇಮಠದ ಉತ್ತರಾಧಿಕಾರಿಗಳಾದ ಶ್ರೀ ರೇಣುಕ ಗಡದೇಶ್ವರ ದೇವರು ,ಮಾವಿನಕಟ್ಟಿ ಹಿರೇಮಠದ ಶ್ರೀ ರುದ್ರಮುನಿ ದೇವರು ಹಾಗು ಮ್ಯಾನೇಜರ ವೀರಭದ್ರಯ್ಯ ಅವರು ಉಪಸ್ಥಿತರಿದ್ದರು