Uncategorized

ನಂದಗಡ ಗ್ರಾಮದಲ್ಲಿ ಕಳೆದ 80 ವರ್ಷಗಳಿಂದ ಒಂದೇ ಗಣಪತಿ ಪ್ರತಿಸ್ಥಾಪನೆ

Share

ಖಾನಾಪೂರ ತಾಲೂಕಿನ ಮಹತ್ವದ ಗ್ರಾಮವೆಂದು ಗುರುತಿಸಲ್ಪಟ್ಟಿರುವ ನಂದಗಡ ಗ್ರಾಮದಲ್ಲಿ ಕಳೆದ 80 ವರ್ಷಗಳಿಂದ ಒಂದು ಗ್ರಾಮ ಒಂದು ಗಣಪತಿಯ ಪರಂಪರೆ ಚಾಲನೆಯಲ್ಲಿದೆ ಗ್ರಾಮದಲ್ಲಿ ವಿವಿಧ ಜಾತಿ-ಧರ್ಮ ವಿಚಾರವುಳ್ಳ ಜನ ಇದ್ದು ಸೌಹಾರ್ದತೆಯಿಂದ ಹಬ್ಬ ಆಚರಿಸುತ್ತಿದ್ದಾರೆ.

ಲೋಕಮಾನ್ಯ ತಿಲಕರ ಪ್ರಭಾವದಿಂದ ನಂದಗಡದಲ್ಲಿ 1944ರಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆರಂಭವಾಯಿತು ದಿ ಬಸಪ್ಪಣ್ಣಾ ಅರಗಾಂವಿ, ಬಾಬುರಾವ್ ದಲಾಲ ,ಚಂಬಣ್ಣಾ ಕಾಪಸೆ, ಆರ್.ಕೆ.ಪಾಟೀಲರ ಮುಂದಾಳತ್ವದಲ್ಲಿ ಗಣೇಶ ಉತ್ಸವ ಪ್ರಾರಂಭವಾಯಿತು.ಅದಿನಿಂದ ಇಂದಿನವರೆಗೆ ಊರಿಲ್ಲಿ ಒಂದೇ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದ್ದು ಇತರೇ ಗ್ರಾಮಗಳಿಗೆ ಮಾದರಿಯಾಗಿದೆ.ಇಲ್ಲಿನ ಮುಖ್ಯ ಬಜಾರ್ ಪೇಟೆಯಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದ್ದು,ಮಂಡಳದ ವತಿಯಿಂದ ಪ್ರತಿ ವರ್ಷ ವಿಭಿನ್ನ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆ ಆಯೋಜಿಸಲಾಗುತ್ತದೆ ಗ್ರಾಮದ ಜನಸಂಖ್ಯೆಯು12 ರಿಂದ 15000 ಸಾವಿರದವರೆಗೆ ಇದ್ದು, ಜೈನ್, ಲಿಂಗಾಯತ, ಮರಾಠಿ, ಮುಸ್ಲಿಂ ಇನ್ನಿತರ ಜಾತಿ ಧರ್ಮಗಳಿದ್ದು ಎಲ್ಲರೂ ಸೇರಿ ಸರಗಡ ಸಂಭ್ರಮದಿಂದ ಭಕ್ತಿ ಪೂರ್ವಕವಾಗಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸುತ್ತಾರೆ.1999 ರಿಂದ 2000ವರೆಗಿನ 50 ವರ್ಷದ ಗಣೇಶ ಉತ್ಸವ ಕಾಲದಲ್ಲಿ ಪ್ರತಿರಾತ್ರಿ ವಿವಿಧ ಸ್ಪರ್ಧೆಗಳ ಏರ್ಪಡಿಸಲಾಗುತ್ತಿತ್ತು.ಈ ಸ್ಪರ್ಧೆಗೆ ಖಾನಾಪೂರ,ಬೆಳಗಾವಿ,ಚಂದಗಡ ತಾಲೂಕುಗಳ ಭಜನಾ ಮಂಡಳಿಗಳು ಭಾಗವಹಿಸುತ್ತಿದ್ದವು.
ಅಲ್ತಾಫ್ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: