Uncategorized

ಉಗಾರದಲ್ಲಿ ಶಾಸಕ ರಾಜು ಕಾಗೆ ಇವರಿಂದ ಎರಡು ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಪೂಜೆ

Share

ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು.

ರವಿವಾರ ರಂದು ಉಗಾರ್ ಖುರ್ದ್ ಪಟ್ಟಣದಲ್ಲಿ ಬಸವೇಶ್ವರ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ಹಾಗೂ ಚೆನ್ನಮ್ಮ ವೃತ್ತದಿಂದ ರೈಲ್ವೆ ಸೇತುವೆ ಮುಂದೆ ಮಂಗಸುಳಿ ಮಾರ್ಗವಾಗಿ ಒಂದು ಕಿಮೀ ಅಂತರದವರೆಗೆ ಎರಡು ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಅನೇಕ ವರ್ಷಗಳಿಂದ ಉಗಾರ್ ಗ್ರಾಮದ ರೈತರು ರಸ್ತೆ ನಿರ್ಮಿಸುವ ಕಾಮಗಾರಿ ಕೈಗೊಳ್ಳಲು ಬೇಡಿಕೆ ಸಲ್ಲಿಸಿದರು ಇದನ್ನು ಗಮನಿಸಿ ಉಗಾರ್ ಗ್ರಾಮದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲು ಚಾಲನೆ ನೀಡಿದ್ದು ಎಲ್ಲ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿಗಳಿಗೆ ಹೆಚ್ಚಿನ ಆಸಕ್ತಿ ತೂರಿ ಗುಣಮಟ್ಟದ ರಸ್ತೆ ನಿರ್ಮಿಸಲು ಶಾಸಕರು ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆ ಅಭಿಯಂತರಾದ ಎಂ. ಎಸ್ .ಮಗಧೂಮ ಕಾಮಗಾರಿ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಗುತ್ತಿಗೆದಾರರ ಎಂ ಎಸ್ ಬೆನಳ್ಳಿ ಇವರು ಶಾಸಕರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಧನಪಾಲ್ ವಾಘೂಡೆ ಇವರಿಂದ ಪೂಜೆ ನೆರವೇರಿತು. ಅತಿಥಿಗಳಾಗಿ ಉಗಾರ್ ಪುರಸಭೆ ಸದಸ್ಯರಾದ ಗಂಗಾಧರ್ ಜೋರಾ ಪುರೆ, ಮಹದೇವ್ ವಡಗಾವೆ,ಹೇಳಿ ರುಣ್ ಮುಲ್ಲಾ ರಾಧಿಕಾ ಗುರು ವಿಜಯ್ ಶಂಕರ್ ವಡ್ಡರ್ ವಿನಾಯಕ್ ಕಾಂಬ್ಳೆ ಅಮರ್ ಜಗತಪ್ ಸತೀಶ್ ಜಗತಾಪ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

Tags: