ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲಗಳ ಚಳಿಗಾಲದ ಅಧಿವೇಶನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸುವರ್ಣ ಸೌಧದ ಹೊರಗೆ ನಡೆಯುವ ಪ್ರತಿಭಟನೆಗಳನ್ನು ತಗ್ಗಿಸಲು ಸಭಾಪತಿಗಳು ವಿಶೇಷ ಕಾಳಜಿ ವಹಿಸಿರುವುದು ಸ್ವಾಗತ ಸಂಗತಿಯಾಗಿದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಹೇಳಿದರು
ವಿಧಾನಸೌಧದ ಒಳಗೆ ಶಾಸಕರು ಅಶಿಸ್ತಿನಿಂದ ನಡೆದುಕೊಳ್ಳುತ್ತಿದ್ದಾರೆ. ಶಾಸಕರು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳುವುದು, ಫಲಕಗಳನ್ನು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆಗಳನ್ನು ಮಾಡುವುದು, ಸದನದಲ್ಲಿಯೇ ಗಾದಿ, ಹಾಸಿಗೆ ಹಾಗೂ ತಲೆದಿಂಬುಗಳನ್ನು ತರಿಸಿ ಮಲಗಿ ಪ್ರತಿಭಟನೆ ಮಾಡುವುದು, ಸಭಾಪತಿಗಳ ಮೇಲೆ ಕಾಗದಗಳನ್ನು ಹರಿದು ಬೀಸಾಕುವುದು, ಸಭಾಪತಿಗಳ ವೇದಿಕೆ ಮೇಲೆ ಏರಿ ಅವರನ್ನು ಎಳೆದಾಡುವುದು ಇಂತಹ ನಡೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿವೆ. ಇಂಥಹ ಪ್ರತಿಭಟನೆಗಳಿಗೆ ಸಭಾಪತಿಗಳು ಕಡಿವಾಣ ಹಾಕಬೇಕು, ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವುದನ್ನು ನಿಷೇಧಿಸಬೇಕೆಂದು ಸಮಾಜ ಸೇವಕ ಶ್ರೀನಿವಾಸ ತಾಳೂಕರ ಇವರು ಒತ್ತಾಯಿಸಿದರು.
ಸದನದಲ್ಲಿ ಉತ್ತರ ಕರ್ನಾಟಕದ ರೈತರ ಸಮಸ್ಯೆ ಹಾಗೂ ಭೀಕರ ಬರಗಾಲ ಕುರಿತು ಶಾಶ್ವತ ಪರಿಹಾರ ಒದಗಿಸಲು ಗಂಭೀರ ಚಿಂತನೆ ಮಾಡಬೇಕು, ರಾಜ್ಯದಲ್ಲಿರುವ ನೀರಾವರಿ ಯೋಜನೆಗಳನ್ನು ತಕ್ಷಣ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು, ಉಭಯ ಸದನಗಳಲ್ಲಿ ಕನ್ನಡ ನಾಡು ನುಡಿ ನೆಲ ಜಲ ಈ ಕುರಿತಾದ ಹಿತ ಚಿಂತನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ವಿನಂತಿ ಮಾಡಿದರು. ಸದನದಲ್ಲಿ ವಿನಾಕಾರಣ ಪ್ರತಿಭಟನೆ, ಸಭಾತ್ಯಾಗ ಅವಕಾಶ ಮಾಡಿಕೊಡದೆ, ಸಮಯ ವ್ಯರ್ಥ ಆಗದಂತೆ ಸಭಾಪತಿಗಳು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಬೈಟ್
ಈ ಸಂದರ್ಭದಲ್ಲಿ ಮಲ್ಲಪ್ಪ ಸೊಂಟಕ್ಕಿ, ಹನುಮಂತ ಬುಚುಡಿ, ಪ್ರಕಾಶ ಶಿರೋಳಕರ, ಉದಯ ವಾಗೂಕರ ಭಾಗಿಯಾಗಿದ್ದರು