ಕಾಗವಾಡ ತಾಲೂಕಿನ ಹಿರಿಯ ವೈದ್ಯರಾದ ಪಾರ್ಶ್ವನಾಥ್ ಮಗದುಮ್ಮ ಡಾಕ್ಟರ್ ಅಶೋಕ ಪಾಟೀಲ ದಂಪತಿಗಳಿಗೆ ಶೆಟ್ಟಿ ಪರಿವಾರದಿಂದ ಆದರ್ಶ ಮಾತಾ-ಪಿತಾ ಪ್ರಶಸ್ತಿ
ನೀಡಿ ಗೌರವಿಸಲಾಯಿತು.
ಇಂದಿನ ವಿಜ್ಞಾನ ಯುಗದ ಹೆಸರಿನಲ್ಲಿ ಅನೇಕ ಕುಟುಂಬಗಳು ತಮ್ಮ ಮಕ್ಕಳನ್ನು ಪಾಶ್ಚಿಮಾತ್ಯಕ್ಕೆ ತಳ್ಳುತಿದ್ದಾರೆ ಮೊಬೈಲ ಬಳಕೆಯಿಂದ ಬಾಲಕರು ತಮ್ಮ ಸಂಸ್ಕೃತಿ ಕಳೆದುಕೊಳ್ಳುತ್ತಿದ್ದಾರೆ.
ಈ ಬಾಲಕರಿಗೆ ಒಳ್ಳೆ ಸಂಸ್ಕಾರದ ಅವಶ್ಯಕತೆ ಇದೆ, ಇಂತಹಾ ಸ್ಥಿತಿಯಲ್ಲಿ ಡಾಕ್ಟರ್ ಪಾರ್ಶ್ವನಾಥ್ ಮಗದುಮ್ಮ ಹಾಗೂ ಡಾಕ್ಟರ್ ಅಶೋಕ ಪಾಟೀಲ ವೈದ್ಯ ದಂಪತಿಗಳು ತಮ್ಮ ಮಕ್ಕಳಿಗ್ಗೆ ಒಳ್ಳೆಯ ಸ್ವಂಸ್ಕಾರ ನೀಡಿದಾರೆ.
ಇವರಿಗೆ ಆದರ್ಶ ಮಾತಾ-ಪಿತಾ ಪ್ರಶಸ್ಥಿ ನೀಡಿ ಗೌರವಿಸಲಾಗಿದೆ ಈ ಆದರ್ಶ ಕುಟುಂಬಗಳ ಅನುಕರಣೆಯನ್ನು ಇನ್ನೊಬ್ಬರು ಮಾಡಿಕೋಳ್ಳಬೇಕು ಎಂದು ನಾದಂನಿ ಜೈನಮಠದ ಜೀನಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.
ರವಿವಾರ ಸಂಜೆ ಕಾಗವಾಡದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯಲ್ಲಿ ಶೆಟ್ಟಿ ಬಂಧುಗಳಿಂದ ತಮ್ಮ ತಂದೆ ತಾಯಿ ಇವರ ಸ್ಮರಣಾರ್ಥವಾಗಿ ಡಾಕ್ಟರ್ ಪಾರ್ಶ್ವನಾಥ್ ಮಗದುಮ್ಮ ಕವಿತಾ ಮಗದುಮ್ ಹಾಗೂ ಶೇಡಬಾಳದ ಡಾಕ್ಟರ್ ಅಶೋಕ್ ಪಾಟೀಲ್ ಹಾಗೂ ವಿಧುಲಿ ಪಾಟೀಲ್ ಈ ವೈದ್ಯ ದಂಪತಿಗಳಿಗೆ ಆದರ್ಶ ಮಾತಾ-ಪಿತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಶೆಟ್ಟಿ ಪರಿವಾರದ ಹಿರಿಯರಾದ ದಿವಂಗತ ಶ್ರೀಮತಿ ಸುಶೀಲಾ ಹಾಗೂ ಭಾವು ಈ ಹಿರಿಯರ ಹೆಸರಿನಿಂದ ಆದರ್ಶ ಮಾತಾ-ಪಿತಾ ಪ್ರಶಸ್ತಿ ನೀಡಲಾಗಿದೆ.
ಡಾಕ್ಟರ್ ಪಾರ್ಶ್ವನಾಥ್ ಮಗದುಮ್ಮ ಕಾಗವಾಡದ ವಿದ್ಯಾಸಾಗರ ಶಿಕ್ಷಣ ಸಂಸ್ಥೆ ಅಧ್ಯಕ್ಷರಿದ್ದಾರೆ, ಇದೇ ರೀತಿ ಶೇಡಬಾಳದ ಭಂಡಾರೆ ಶಿಕ್ಷಣ ಸಂಸ್ಥೆಯ ಡಾಕ್ಟರ್ ಅಶೋಕ್ ಪಾಟೀಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಈ ಇಬ್ಬರು ವೈದ್ಯರ ಮಕ್ಕಳು ವೈದ್ಯರಾಗಿ ಮಹಾರಾಷ್ಟ್ರದ ಮಿರಜದಲ್ಲಿ ಆಸ್ಪತ್ರೆಗಳು ತೆರೆದು ಖ್ಯಾತ ವೈದ್ಯರೆಂದು ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಗಮನಿಸಿ ಆದರ್ಶ ಮಾತಾ-ಪಿತಾ ಪ್ರಶಸ್ತಿ ನೀಡಲಾಗಿದೆ ಎಂದು ಡಾಕ್ಟರ್ ಆದಿನಾಥ ಶೆಟ್ಟಿ ಹೇಳಿದರು
.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಪಿ.ಬಿ.ಮಗದುಮ್ ಕಾಗವಾಡದ ವಿದ್ಯಾಸಾಗರ್, ಶೇಡಬಾಳದ ಭಂಡಾರಿ ಶಿಕ್ಷಣ ಸಂಸ್ಥೆ, ಕುಸನಾಳ ಗ್ರಾಮದ ಪಾಶ್ರ್ವನಾಥ್ ಶಿಕ್ಷಣ ಸಂಸ್ಥೆಗೆ ತಲ 2 ಲಕ್ಷ 11 ಸಾವಿರು ದೇಣಿಗೆಯಾಗಿ ನೀಡುವ ಬಗ್ಗೆ ಘೋಷಣೆ ಮಾಡಿದರು. ಮೂರು ಸಂಸ್ಥೆಗಳ ತಲಾ ಒಂದು ಶಿಕ್ಷಕರನ್ನು ಆದರ್ಶ ಶಿಕ್ಷಕರಾಗಿ ಗುರುತಿಸಿ ಸನ್ಮಾನಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು. ವಿಜ್ಞಾನದ ಲ್ಯಾಬರರಿ ಕೊರತೆ ಇದ್ದು, ಅದು ಪೂರ್ತಿ ಗೊಳಿಸುತ್ತೇನೆ ಎಂದರು.
ಆದರ್ಶ ಮತಾ-ಪಿತಾ ಪ್ರಶಸ್ತಿಯಲ್ಲಿ ನೀಡಿರುವ 25000 ರೂ. ದಲ್ಲಿ ತಮ್ಮ ಬಳಿಯ 25,000 ರೂ. ಹೀಗೆ 50,000 ಡಾ. ಅಶೋಕ್ ಪಾಟೀಲ್ ಶೇಡಬಾಳದ ಭಂಡಾರೆ ಶಿಕ್ಷಣ ಸಮಿತಿಗೆ ದಾನವಾಗಿ ನೀಡಿದರು.
ಸಮಾರಂಭದಲ್ಲಿ ಶೆಟ್ಟಿ ಬಂಧುಗಳು, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಮೀರಜದ ಖ್ಯಾತ ವೈದ್ಯರಾದ ಡಾ. ಬಿ.ಎ.ಕುರಣೆ, ಡಾ. ಮಾಂಕಾಪುರೆ, ಡಾ. ಶರದ ಭೋಮಾಜ, ಡಾ. ವಿಕ್ರಾಂತ ಮಗದುಮ, ಸುಭಾμï ಕಠಾರೆ, ಮಾಮಸಾಹೇಬ್ ಪಾಟೀಲ್, ಸುನಿಲ್ ಪಾಟೀಲ್, ಜಿನ್ನಪ್ಪಾ ನಾಂದನಿ, ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಸಂಚಾಲಕ ವಿಜಯ ಕರೋಲೆ, ಪದ್ಮಣ್ಣಾ ಕರವ, ರಾಜು ಗೋಪಾಜೆ, ವಿದ್ಯಾಧರ ಮನಗಾಂವೆ ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ