Uncategorized

ಜೈನ ಸಮಾಜದ ಸಾಧುಗಳಿಗೆ ಯಾವುದೇ ರಕ್ಷಣೆ ಇಲ್ಲ: ಗುಣದರನಂದಿ ಮಹಾರಾಜ

Share

ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು” ಎಂಬ ಸಂದೇಶ ನೀಡುವ ಸಮಾಜದ ಬಾಂಧವರಿಗೆ ಮತ್ತು ಜೈನ ಸಾಧುಗಳಿಗೆ ಯಾವುದೇ ರಕ್ಷಣೆ ಇಲ್ಲ. ಒಂದೇ ವರ್ಷದಲ್ಲಿ ನಾಲ್ಕು ಸಾಧುಗಳ ಹತ್ಯೆ ಮಾಡಿದ್ದಾರೆ. ಈ ಕಾರಣ ಜೈನ ಸಮಾಜದ ಮುಖಂಡರೊಂದಿಗೆ ಚರ್ಚಿಸಲು ಜನವರಿ 28ರಂದು ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದಲ್ಲಿ ಬಹಿರಂಗ ಸಭೆ ಕರೆದಿದ್ದೇನೆ. ಸಮಾಜಕ್ಕೆ ನ್ಯಾಯ ನೀಡದೆ ಹೋದರೆ, ಜೈನ ಸಾಧುಗಳಿಗಾಗಿ ನನ್ನ ಜೀವನ ತ್ಯಾಗ ಮಾಡಲು ಸಿದ್ದನಾಗಿದ್ದೇನೆ ಎಂದು ಜೈನ ಸಮಾಜದ ರಾಷ್ಟ್ರಸಂಸ್ಥೆ, ಗುಣದರನಂದಿ ಮುನಿಮಹಾರಾಜರು ಕೊಗ್ನೋಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ಸಮಾಜಕ್ಕೆ ಕರೆ ನೀಡಿದ್ದಾರೆ.

ಗುರುವಾರ ರಂದು ಶ್ರೀ 108 ಆಚಾರ್ಯ ಶಾಂತಿಸಾಗರ್ ಮುನಿಮಹಾರಾಜರ ತಪೋಭೂಮಿವಾಗಿರುವ ಕೊಗ್ನೋಳ್ಳಿ ಗ್ರಾಮದಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ ಭವ್ಯ ಸಭಾಭವನದ ಲೋಕಾರ್ಪಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ರಾಷ್ಟ್ರಸಂಸ್ಥೆ ಗುಣದರನಂದಿ ಮುನಿ ಮಹಾರಾಜರು ಬೆಳಗಾವಿ ಜಿಲ್ಲೆಯ ಉಸ್ತುವರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸಿದರು.

ರಾಷ್ಟ್ರಸಂತ ಗುಣದರನಂದಿ ಮುನಿ ಮಹಾರಾಜರು ಮಾತನಾಡುತ್ತಾ ಈ ವರ್ಷ ಚಂಪಾಪುರಿ, ಇಂದೊರ, ಕರ್ನಾಟಕ ಮತ್ತು ಪಾಲ್ಕಿ ಈ ಸ್ಥಳಗಳಲ್ಲಿ ಜೈನ ಮುನಿಗಳ ಹತ್ಯಾಯಾಗಿದೆ ಇದರ ತನಿಖೆ ಪೂರ್ಣಗೊಂಡೇ ಇಲ್ಲ. ಅಹಿಂಸಾವಾದಿ ಜೈನ ಧರ್ಮದ ಮುನಿಗಳಿಗೆ ರಕ್ಷಣೆ ಇಲ್ಲಾದಾರೆ ಎನು ಮಾಡುವುದು ಗ್ರಹ ಸಚಿವ ಡಾಕ್ಟರ್ ಪರಮೇಶ್ವರ್ ಇವರ ಗಮನಕ್ಕೆ ತಂದಿದೆ. ಆದರೆ ಪರಿಣಾಮ ಎನು ಆಗಿಲ್ಲ ಈಗ ಇಲ್ಲಿಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶ್ರೀಮತಿ ಶಶಿಕಲಾ ಜೊಲ್ಲೆ ಜೈನ ಸಮಾಜದ ಪ್ರಮುಖ ರಾಹುಸಾಹೇಬ್ ಪಾಟೀಲ್, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಹಿರಿಯರು ಇದ್ದಾರೆ. ಈ ಗಂಭೀರ ವಿಷಯ ಚರ್ಚಿಸಿ ಜೈನ ಸಾಧುಗಳಿಗೆ ಅಭಯ ನೀಡಿರಿ ಎಂದು ಸ್ಪಷ್ಟವಾಗಿ ಸಭೆಯಲ್ಲಿ ಕೇಳಿಕೊಂಡರು. ಈ ಗಂಭೀರ ವಿಷಯ ಸಮಾಜದ ಹಿರಿಯರೊಂದಿಗೆ ಚರ್ಚಿಸಲು ಇದೆ ಜನವರಿ 28 ರಂದು ಸಭೆ ಅಹ್ವಾನಿಸಿದ್ದೇನೆ. ಮತ್ತು ಫೆಬ್ರವರು 8 ರಂದು ಬೈರಂಗ ಸಭೆ ಶಮನೆವಾಡಿ ಗ್ರಾಮದಲ್ಲಿ ಕರದಿದ್ದೇನೆ. ಸಾಧುಗಳ ಸೌರಕ್ಷನಗಾಗಿ ನಾನು ನನ್ನ ಜೀವನ ತ್ಯಾಗ ಮಾಡಲು ಸಿದ್ಧನಾಗೇದೆನೆ ಎಂದು ಒಂದು ರೀತಿ ಎಚ್ಚರಿಕೆ ನೀಡಿದ್ದಾರೆ.

ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಜೈನ ಸಮಾಜ ಪುರಾತನ ಸಮಾಜ. ಕನ್ನಡ ಭಾಷೆ ಪ್ರಾರಂಭವಾಗಿದ್ದು ಜೈನ ಸಮಾಜದಿಂದ, ಇದು ಒಂದು ಸಜ್ಜನ ಸಮಾಜ ಅವರ ದಿನನಿತ್ಯದ ಕೃಷಿ ಚಟುವಟಿಕೆಗಳು, ಧರ್ಮದ ಬಗ್ಗೆ ಅಭ್ಯಾಸ, ವ್ಯಾಪಾರ ಮುಂತಾದ ಕೆಲಸಗಳಲ್ಲಿ ತಮ್ಮನೆ ತಾವು ತೊಡಗಿಸಿಕೊಳ್ಳುತ್ತಾರೆ. ಮಾಜಿ ಸಚಿವ ವೀರಕುಮಾರ್ ಪಾಟೀಲರು ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸಿ ಎಲ್ಲಾ ಸಚಿವ ಶಾಸಕರ ಅನುದಾನ ತೆಗೆದುಕೊಂಡು ಸುಮಾರು ಎರಡು ಕೋಟಿ ವೆಚ್ಚದಲ್ಲಿ ಶಾಂತಿಸಾಗರ ಸಮುದಾಯ ಭವನ ನಿರ್ಮಿಸಿದ್ದಾರೆ. ಈ ಭವನ ಜೈನ ಸಮಾಜಕ್ಕೆ ಮೀಸಲು ಇಲ್ಲಾ. ಪ್ರತಿಯೊಂದು ಸಮಾಜದ ಇದನ್ನು ಬಳಸಿಕೊಳ್ಳಲಿ ಎಂದು ವೀರಕುಮಾರ ಪಾಟೀಲರು ಸ್ಪಷ್ಟಪಡಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದರು

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡುತ್ತಾ ಯಾವ ರೀತಿ ನಾವು ದಿನನಿತ್ಯ ಬಳಸುವ ವಾಹನಗಳು ಸರ್ವಿಸಿಂಗ್ ಮಾಡುತ್ತೇವೆ. ಅದೇ ರೀತಿ ಮಾನವನು ದಿನ ನಿತ್ಯ ಜೀವನದಲ್ಲಿ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಆತನಿಗೆ ಮನಶುದ್ದಿ ಮಾಡಿಸಿಕೊಳ್ಳಲು ಮುನಿಗಳ ಹತ್ತಿರ ಹೋಗಿ ಅವರ ನೀಡಿರುವ ಪ್ರವಚನಗಳು ಕೇಳಿ ತಮ್ಮ ಮನಸ್ಸುಗಳು ಸ್ವಚ್ಛಗೊಳಿಸಿರಿ ಜೈನ ಸಮಾಜ ಈ ಕುಟುಂಬಗಳು ಪ್ರತಿಯೊಬ್ಬರಿಗೆ “ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು” ಈ ಸಂದೇಶದಂತೆ ಬಾಳುತ್ತಾರೆ. ಕೊಗ್ನೋಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲರ ಬೇಡಿಕೆ ಅಂತೆ ಶಾಸಕ ಹಾಗೂ ಸಂಸದರ ಅನುದಾನದಿಂದ ಸುಮಾರು 34 ಲಕ್ಷ ಅನುದಾನ ನೀಡಿದ್ದೇವೆ ಎಂದರು

ಮಾಜಿ ಸಚಿವ ವೀರಕುಮಾರ ಪಾಟೀಲ್ ಮಾತನಾಡಿ, ಆರ್ಚಾಯ ಶಾಂತಿಸಾಗರ್ ಭವನ ಕಟ್ಟಿಸುವ ಗುರಿಯನ್ನು ಗ್ರಾಮದ ಜನರು ಹೊಂದಿದ್ದರು. ಈ ಸ್ಥಳದಲ್ಲಿ ಶಾಂತಿಸಾಗರ್ ಮಹಾರಾಜರು ಉಳಿದು ಚಾತುರ್ಮಾಸ ಕೈಗೊಂಡಿದ್ದರು. ಈ ತಪೊಭೂಮಿಯಲ್ಲಿ ಸಣ್ಣ ಗುಂಪಿನಲ್ಲಿ ಉಳಿದು ಅವರ ತಪಸ್ಸ ಮಾಡಿದರು. ಹಿರಿಯರು ಒಂದುಗುಡಿ ಭವನ ಕಟ್ಟಿಸುವ ಗುರಿ ಹೊಂದಿದ್ದರು. ಸುಮಾರು ಎರಡು ಕೋಟಿ ಅನುದಾನ ಸಂಗ್ರಹಿಸಿ ಇದನ್ನು ಕಟ್ಟಿಸಿದ್ದೇವೆ. ಎಲ್ಲ ಸಮಾಜಕ್ಕಾಗಿ ಬಳಸುವಂತೆ ಮಾಡಿದ್ದೇನೆ ಎಂದು ಹೇಳಿದರು

ಸಮಾರಂಭದ ದಿವ್ಯಸಾನಿಧ್ಯ ಆಚಾರ್ಯ ಜಿನಸೇನ ಮಹಾರಾಜರು, ಸ್ವಸ್ತಿಶ್ರೀ ಲಕ್ಷ್ಮಿಸೇನ್ ಭಟ್ಟಾರಕ ಸ್ವಾಮೀಜಿ, ವರುರ್ ಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟರ ಸ್ವಾಮೀಜಿ, ಹೊಂಭುಜದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟರ ಸ್ವಾಮೀಜಿ ವಹಿಸಿದರು
.
ಸಮಾರಂಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ , ಶಾಸಕಿ ಶಶಿಕಲಾ ಜೊಲ್ಲೆ , ಮಾಜಿ ಶಾಸಕ ಕಾಕಾ ಪಾಟೀಲ್, ಶಾಮರಾವ ಘಾಟಗೆ, ದಕ್ಷಿಣ ಭಾರತ ಜೈನ ಸಭಾ ಅಧ್ಯಕ್ಷ ರಾಹುಸಾಹೇಬ ಪಾಟೀಲ, ದಾನಭೂಷಣ ಎಂಬ ಪ್ರಶಸ್ತಿ ಪಡೆದ ಡಾಕ್ಟರ್ ಎನ್.ಎ.ಮಗದುಮ್, ದಾನವೀರ ಮಹಾವೀರ್ ಪಡನಾಡ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಯಶಸ್ವಿಗೊಳಿಸಲು ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಪಂಕಜ್ ವೀರಕುಮಾರ್ ಪಾಟೀಲ್, ಪ್ರೀತಂ ಪಟೀಲ್ ಹಾಗೂ ಎಲ್ಲ ಸದಸ್ಯರು ಯಶಸ್ವಿಯಾಗಿ ಸಹಕರಿಸಿದರು.

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: