Uncategorized

ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ:ಶಾಂತಿಸೇನ್ ಮುನಿ ಮಹಾರಾಜರು

Share

ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆಂದು ಆಚಾರ್ಯ ಶಾಂತಿಸೇನ್ ಮುನಿ ಮಹಾರಾಜರು ಹೇಳಿದರು.

ಶುಕ್ರವಾರ ಸಂಜೆ ಶೇಡಬಾಳ ಪಟ್ಟಣದ ಶ್ರೀ ಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿಯ ಸೌ ಜಯಶ್ರೀ ಜಿನ್ನಪ್ಪಾ ನಾಂದಣಿ ಪೂರ್ವ ಪ್ರಾಥಮಿಕ ಶಾಲೆ, ಶ್ರೀ ಮಹಾದೇವ್ ಬಲವಂತ ಭಂಡಾರೆ ಕನ್ನಡ ಮಧ್ಯಮ ಪ್ರಾಥಮಿಕ ಶಾಲೆ, ಶ್ರೀ 108 ಆಚಾರ್ಯ ಸುಬಲಸಾಗರ್ ಪ್ರೌಢ ವಿದ್ಯಾಮಂದಿರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ದಿವ್ಯ ಸಾನಿಧ್ಯ ಆಚಾರ್ಯ ಶಾಂತಿಸೇನ್ ಮುನಿ ಮಹಾರಾಜರು ವಹಿಸಿಕೊಂಡಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ ಪಾಟೀಲ್ ಮಾತನಾಡಿ, ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 34 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 18 ವರ್ಷದಲ್ಲಿ ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿ ದಾಖಲೆ ಸೃಷ್ಟಿಸಿದ್ದಾರೆ. ಈ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯದಲ್ಲಿ ಒಳ್ಳೆ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಗಳ ಬಗ್ಗೆ ಮಾಹಿತಿ ನೀಡಿ ಹೊಸ ಶಿಕ್ಷಣ ನೀತಿ ಆದೇಶ ಬಂದಿದೆ ಎಂದರು .

ಶೇಡಬಾಳ ಪಟ್ಟಣದ ಪೊಲೀಸ್ ಪಾಟೀಲರಾದ ಮಾಮಾಸಾಹೇಬ್ ಪಾಟೀಲ್ ಇವರು ಗ್ರಂಥಾಲಯ ನಿರ್ಮಿಸಲು 5 ಲಕ್ಷ ರೂಪಾಯಿ ದಾನವಾಗಿ ನೀಡಿದ್ದು, ಗ್ರಂಥಾಲಯದ ಹೊಸ ಕಟ್ಟಡದ ಉದ್ಘಾಟನೆ ಮಾಡಲಾಯಿತು ಇದೇ ರೀತಿ ನೆರೆಯ ಸಾಂಗ್ಲಿ ಪಟ್ಟಣದ ಲಠ್ಠೆ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ರಾವ್‍ಸಾಹೇಬ್ ಪಾಟೀಲ್ ಇವರು ಶಾಲಾ ಕೊನೆ ನಿರ್ಮಿಸಲು 2 ಲಕ್ಷ ದಾನವಾಗಿ ನೀಡಿದ್ದಾರೆ. ಶೇಡಬಾಳ ಪಟ್ಟಣದ ಮಹಾವೀರ ಜೈನ್ ಮಂದಿರದ ಅರ್ಚಕ ಪುಷ್ಪದಂತೆ ಉಪಾಧ್ಯಾಯ ತಂದೆ-ತಾಯಿ ಸ್ಮರಣಾರ್ಥವಾಗಿ 2.50 ಲಕ್ಷ ರೂಪಾಯಿ ದಾನವಾಗಿ ನೀಡಿದರು, ಚಿಕ್ಕೋಡಿ ಅಬಕಾರಿ ನಿರೀಕ್ಷಕರಾದ ಸುನಿಲ್‍ಕುಮಾರ್ ಡಿ. ಇವರು 1.50 ಲಕ್ಷ ರುಪಾಯಿ ದಾನವಾಗಿ ನೀಡಿದರು, ದಂಪತಿಗಳನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಜಿನ್ನಪ್ಪಾ ನಾಂದಣಿ, ನಾಗರಾಜ್ ನಾಂದಣಿ ವರದಿ ವಾಚನ ಮಾಡಿದರು,ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಮಹಾವೀರ್ ಪಾಟೀಲ್, ಅತಿಕ್ರಾಂತ ಪಾಟೀಲ, ನೇಮಗೌಡಾ ಘೇನಾಪಗೊಳ, ಭರತ ನಾಂದ್ರೆ, ಶಾಂತಿಸಾಗರ್ ಆಶ್ರಮದ ಮುಖ್ಯಸ್ಥ ರಾಜುಗೌಡ ನಾಂದ್ರೆ, ಪ್ರಕಾಶ ಯಂದಗೌಡರ, ಧನ್ಯಕುಮಾರ್ ಶೆಟ್ಟಿ, ಸಂಸ್ಥೆಯಲ್ಲ ಸಂಚಾಲಕರು, ಪಾಲಕರು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಅವಿನಾಶ್ ಪಾಟೀಲ್ ವಂದಿಸಿದರು.

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: