Uncategorized

ಪರಿಶಿಷ್ಟ ಪಂಗಡದವರಿಗೆ ಹೊಲಿಗೆ ಯಂತ್ರ ವಾಟರ್ ಫಿಲ್ಟರ್ ವಿತರಿಸಿದ ಶಾಸಕ ರಾಜು ಕಾಗೆ

Share

ಉಗಾರ ಪುರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಶುದ್ಧ ನೀರಿನ ವಾಟರ್ ಫಿಲ್ಟರ್ ಹಾಗು ಪರಿಶಿಷ್ಟ ಪಂಗಡದವರಿಗೆ ಹೊಲಿಗೆ ಯಂತ್ರವನ್ನು ಶಾಸಕ ರಾಜು ಕಾಗೆ ವಿತರಿಸಿದರು

ಶುಕ್ರವಾರ ರಂದು ಉಗಾರ ಪುರಸಭೆಯಲ್ಲಿ 2019-20 ರಿಂದ 2023ರ ವರಿಗಿನ ಪರಿಶಿಷ್ಟ ಪಂಗಡದವರಿಗೆ ಸಮಾಜದ ಯೋಜನೆಯಡಿ ವ್ಯಕ್ತಿಗತ ಕಲ್ಯಾಣ ಕಾರ್ಯಕ್ರಮಗಳ 5.57 ಲಕ್ಷ ರೂ ವೆಚ್ಚದಲ್ಲಿ 26 ಫಲಾನುಭಾವಿಗಳಿಗೆ ಹೋಲಿಗೆ ಯಂತ್ರ, ಪಿಕೊ ಫಾಲ ಯಂತ್ರ ವಿತರಿಸುವ ಕಾರ್ಯಕ್ರಮ ನೆರವೇರಿತು ಇದೆ ಸಂದರ್ಭದಲ್ಲಿ ಅಂತ್ಯಕ್ರಿಯೆಗೆ ಸಾಗಿಸುವ ಮುಕ್ತಿ ವಾಹನ ಉದ್ಘಾಟನೆ ನಡೆಯಿತು .

ಪರಿಶಿಷ್ಟ ಪಂಗಡದವರಿಗೆ ಯೋಜನೆಯಡಿಯಲ್ಲಿ ಪುರಸಭೆ 7 ಪೌರ ಕಾರ್ಮಿಕರಿಗೆ ಶುದ್ಧ ನೀರಿನ ವಾಟರ್ ಫಿಲ್ಟರ್ ವಿತರಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ
ಸಮಾಜದಲ್ಲಿ ಚುನಾಯಿತ ಸದಸ್ಯರು ದೊಡ್ಡವರಲ್ಲ ಪಟ್ಟಣಗಳಲ್ಲಿ ಪ್ರತಿ ದಿನ ರಸ್ತೆಯಲ್ಲಿ ಕಸಗುಡಿಸುವರು ಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು ದ್ವೊಡವರು ಅವರಿಗೆ ಮಾನ ಸನ್ಮಾ ನನೀಡಬೇಕು, ನಮ್ಮಂತಹ ಚುನಾಯಿತ ಸದಸ್ಯರಿಗೆ ಹೂವಿನ ಮಾಲೆ ಶಾಲು ಹಾಕಕೂಡದು ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಸುನೀಲ ಬಬಲಾದಿ ಸ್ವಾಗತಿಸಿ ಯೋಜನೆಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಮಹಾದೇವ ವಡಗಾಂವೆ, ಪ್ರಫುಲ್ ಥೋರುಶೆ, ಹರುಣ ಮುಲ್ಲಾ, ಅಮರ ಜಗತಾಪ, ಬಸ್ವರಾಜ ಪಾಟೀಲ, ಸತೀಶ ಜಗತಾಪ, ಪ್ರತಾಪ ಜತರಾಟೆ, ಮಹಿಳಾ ಸದಸ್ಯರಾದ ಹೀನಾ ಹೊಸಮನಿ, ರಾಧಿಕಾ ಗುರವ, ಫಾತಿಮಾ ನಧಾಫ, ಸುಮನ ರಾಜಮಾನೆ, ದೀಲಿಪ ಹೊಲೊಳೆ, ವಸಂತ ಖೊತ, ಶಂಕರ ವಡೆಯರ ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: