ಹುಡುಗಿಯರ ಅಂದದ ಬಗ್ಗೆ ಕಾಂಗ್ರೇಸ ಶಾಸಕರೊಬ್ಬರು ಆಡಿದ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ ನಾಯಕರು ದಿನದಿಂದ ದಿನಕ್ಕೆ ಯಾವದಾದರೂ ವಿಷಯಕ್ಕೆ ಚರ್ಚೆಯಲ್ಲಿದ್ದಾರೆ ಬೆಳಗಾವಿ ರಾಜಕಾರಣದಲ್ಲಿ ಕಾಂಗ್ರೆಸ ನಾಯಕರು ಸುದ್ದಿಯಲ್ಲಿರುವುದು ಮಾಮೂಲಿ ಆದರೆ ತುಂಬಿದ ಸಭೆಯಲ್ಲಿ ಶಾಸಕರೊಬ್ಬರು ಚಂದದ ಹುಡುಗಿಯರ ಬಗ್ಗೆ ವ್ಯಾಮೋಹದ ಮಾತನಾಡುವುದು ಎಷ್ಟರ ಮಟ್ಟಿಗೆ ಸೂಕ್ತ, ಹಿರಿಯ ವಯಸ್ಸಿನಲ್ಲಿ ಮಹಿಳೆಯರ ಬಗ್ಗೆ ಶಾಸಕರ ಚಪಲದ ಮಾತು ಬಾರಿ ಸಂಕಷ್ಟಕ್ಕೆ ಎಡೆ ಮಾಡಿದೆ ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್
ನನಗೆ ಆಪರೇಶನ್ ಆದಾಗ ಅಷ್ಟೋಂದು ನೋವಾಗಿರಲಿಲ್ಲ. ಆದರೆ ನನಗೆ ಚಂದದ ನರ್ಸ್ ಗಳು ನನಗೆ ಅಜ್ಜಾ ಎಂದರೆ ಮಾನಸಿಕ ಆಗುತ್ತಿತ್ತು ಎಂದು ಕಾಗವಾಡ ಶಾಸಕ ರಾಜು ಕಾಗೆ ಚಪಲದ ಮಾತನಾಡಿದ್ದಾರೆ. ಅಷ್ಟಕ್ಕೂ ಹಿಂತಹ ಮಾತುಗಳನ್ನು ಆಡಲು ಶಾಸಕರಿಗೆ ಏನ್ ಆಗಿತ್ತು ದೇವರೇ ಬಲ್ಲ . ವೇದಿಕೆ ಮೇಲೆ ಅಥಣಿ ಶಾಸಕ ಲಕ್ಷ್ಮಣ ಸವದಿ ಇದ್ರೂ ಅಲ್ಲಿ ನಡೆದಿದ್ದು ಯಾವುದು ನಾಟಕ ಅಥವಾ ಮನರಂಜನೆ ಕಾರ್ಯಕ್ರಮ ಅಲ್ಲ,ನಡೆದಿದ್ದು ಸಾಂಸ್ಕ್ರತಿಕ ಕಾರ್ಯಕ್ರಮ ಅಂತಹ ತುಂಬಿದ ಸಭೆಯಲ್ಲಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ವ್ಯಾಮೋಹದ ಹೇಳಿಕೆ ನೀಡಿದ್ದು ಕಾಂಗ್ರೆಸ ಪಕ್ಷಕ್ಕೆ ಮುಜಗರ ತಂದಿದೆ .
ಅಷ್ಟಕ್ಕೂ ಮಾತನಾಡಿದ್ದು ಏನು ..?
ನನಗೆ ಲೀವರ್ ಆಪರೇಷನ್ ಆದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಬಂದು ನನ್ನ ಅರೋಗ್ಯ ವಿಚಾರಿಸಿದ್ದರು. ಆದರೆ ನಾನು ಅವರಿಗೆ ಹೇಳಿದ್ದೆ. ನಿಮ್ಮಲ್ಲಿ ಸುಂದರ ಹುಡುಗಿಯರು ನರ್ಸ್ ಇದ್ದಾರಲ್ಲ , ಅವರು ಅಜ್ಜ ಎಂದರೆ ನನಗೆ ನೊವಾಗುತ್ತದೆ ಎಂದು ಹೇಳಿದ್ದಾಗ ಮಂದಿಯೆಲ್ಲ ಕಿಕ್ಕಿರಿದು ಸಿಳ್ಳೆ ಚಪ್ಪಾಳೆ ಹೊಡೆದಿದ್ದು ನಗೆಪಾಡಾಗಿದೆ. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಕೂಡಾ ಉಪಸ್ಥಿತರಿದ್ದು ಅವರ ಮಾತಿಗೆ ನಕ್ಕಿದ್ದು ನಾಚಿಕೆಗೇಡು ವಿಚಾರ
ಸದ್ಯ ಹಿರಿಯ ಶಾಸಕ ರಾಜು ಕಾಗೆ ಹಿಂತಹ ಚಪಲದ ಮಾತುಗಳನ್ನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಅರೆ ಈ ವಯಸ್ಸಿನಲ್ಲಿ ಇವರಿಗೆ ಹಿಂತಹ ಮಾತುಗಳು ಶೋಭೆ ತರುತ್ತಾ ಎಂದು ನೆಟ್ಟಿಗರು ಚೀಮಾರಿ ಹಾಕುತ್ತಿದ್ದಾರೆ .
ಶಾಸಕ ರಾಜು ಕಾಗೆ ಅವರ ಮಾತಿನಿಂದ ಮಹಿಳೆಯರ ಮೇಲೆ ಇರುವ ವ್ಯಾಮೋಹ ಎದ್ದು ಕಾಣಿಸುತ್ತಿದೆ ಎಂದು ಕಾಗವಾಡ ಜನತೆ ಹೇಳ್ತಿದೆ
ಶಾಸಕ ರಾಜು ಕಾಗೆ ಅವರು ಆಡಿರುವ ಹೇಳಿಕೆಗೆ ಕ್ಷಮೆ ಯಾಚಿಸಬೇಕೆಂಬುದೇ ನಮ್ಮ ಆಶಯವಾಗಿದೆ
ಇವರ ಮಾತುಗಳನ್ನು ಸರಕಾರ ಮತ್ತು ಮುಖ್ಯಮಂತ್ರಿಗಳು ಯಾವ ರೀತಿ ಪರಿಗಣಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ .
ಸ್ಪೆಷಲ್ ಪೊಲಿಟಿಕಲ್ ಬಿರೊ
ಇನ್ ನ್ಯೂಸ್