Uncategorized

ಮರಳಿ ಮಹಾರಾಷ್ಟ್ರಕ್ಕೆ ಸಂಚಾರ ಬೆಳಸುತ್ತಿರುವ ಕರ್ನಾಟಕ ಬಸ್ಸಗಳು

Share

ಕರ್ನಾಟಕ ರಾಜ್ಯದಿಂದ ಕಾಗವಾಡ ಮಾರ್ಗವಾಗಿ ಪ್ರತಿದಿನ ಸುಮಾರು 300 ಬಸಗಳು ಸಂಚಾರಿಸುತ್ತಿದ್ದವು. ಮಂಗಳವಾರ ಹಾಗು ಬುಧವಾರರಂದು ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜ ಮಿಸಲಾತಿಗಾಗಿ ಕೈಗೊಂಡ ಹಿನ್ನೆಲೆ ಮಹಾರಾಷ್ಟ್ರ ಬಂದದಲ್ಲಿ ಬಸ್ಸುಗಳು ಮಹಾರಾಷ್ಟ್ರಕ್ಕೆ ತರಳದೆ ಕಾಗವಾಡದಿಂದ ಮರಳಿ ಕರ್ನಾಟಕ ಡಿಪೋಗಳಿಗೆ ಕಳಿಸಲಾಗುತ್ತಿತ್ತು ಇದರಿಂದ ಸೂಮಾರು 8 ಲಕ್ಷ ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ

ಬುಧವಾರ ರಂದು ರಾಜ್ಯದ ಬೇರೆ-ಬೇರೆ ಡಿಪೋಗಳಿಂದ ಕಾಗವಾಡ ಮಾರ್ಗವಾಗಿ ಮಹಾರಾಷ್ಟ್ರ ರಾಜ್ಯದ ಮುಂಬೈ, ಪುಣೆ, ನಾಸಿಕ್, ಸಾಂಗ್ಲಿ, ಕೊಲ್ಲಾಪುರ್ ಮುಂತಾದ ನಗರಗಳಲ್ಲಿ ಸಂಚಾರಿಸುತ್ತಿರುವ 300 ಬಸ್ಸುಗಳು ಕಾಗವಾಡ ಬಸ್ ನಿಲ್ದಾಣದಿಂದ ಎರಡನೇ ದಿನವೂ ನಿಂತು ಮರಳಿ ಡಿಪೊಗಳಿಗೆ ಕಳಿಸಲಾಗಿದೆ.
ಕರ್ನಾಟಕ ರಾಜ್ಯದ ಮೀರಜ ಬಸ ಡಿಪೊದಲ್ಲಿ ನಿಯಂತ್ರಿಸುತ್ತಿರುವ ನಿಯಂತ್ರಕರಾದ ಸಂಭಾಜಿ ಸುಗುತೆ ಇನ್ ವಾಹಿನಿಗೆ ಮಾಹಿತಿ ನೀಡಿ ಮಾತನಾಡಿದ ಅವರು , ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠಾ ಸಮಾಜದ ಮೀಸಲಾತಿ ಬಗ್ಗೆ ಉಗ್ರವಾದ ಹೋರಾಟ ಪ್ರಾರಂಭಿಸಿದ್ದು, ಮಂಗಳವಾರ ಹಾಗೂ ಬುಧವಾರ ಎರಡು ದಿನ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಿ ಬರುವ ಬಸ್ಸುಗಳನ್ನು ಮರಳಿ ಕಲಿಸಲಾಗುತ್ತಿತ್ತು , ಇದರಿಂದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಅಷ್ಟೇ ಅಲ್ಲದೆ ಪ್ರತಿದಿನ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಾನಿ ಕೆ.ಎಸ್.ಆರ್.ಟಿ.ಸಿ ಗೆ ಆಗುತ್ತಿದೆ ಎಂದರು .
ಈಗಾಗಲೇ ಮಹಾರಾಷ್ಟ್ರದ ಕೆಲ ಬಸ್‍ಗಳು ಬುಧವಾರ ರಂದು ಕರ್ನಾಟಕದಲ್ಲಿ ಬಂದು ಹೋಗಿವೆ. ಈ ವಿಷಯ ಮೇಲಾಧಿಕಾರಿಗಳಿಗೆ ತಿಳಿಸಿದರು ಇವತ್ತು ರಾಜ್ಯೋತ್ಸವ ಇದ್ದಿದ್ದರಿಂದ ಮಹಾರಾಷ್ಟ್ರದಲ್ಲಿ ಕರಾಳ ದಿನಾಚರಣೆ ಆಚರಿಸುತ್ತಾರೆ ಇದರಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಬಸ್ ಕಳಿಸಲು ನಿರಾಕರಿಸಿದ್ದೇವೆ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಗವಾಡದ ಮಾಜಿ ಸೈನಿಕ ರಾಜು ವಡ್ಡರ್ ಮಾತನಾಡಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಅನೇಕ ಪ್ರಯಾಣಿಕರು ಆಸ್ಪತ್ರೆಗೆ ಹೋಗಿಬರುತ್ತಾರೆ. ಅವರಿಗೆ ಎರಡನೇ ದಿನವೂ ಪ್ರಯಾಣಿಸಲು ತೊಂದರೆಯಾಗಿದೆ. ಈಗಾಗಲೇ ಮಹಾರಾಷ್ಟ್ರದ ಬಸ್ಸುಗಳು ಕರ್ನಾಟಕಕ್ಕೆ ಇವತ್ತು ನಿರಂತರ ಬಂದು ಹೋಗಿವೆ. ಇದನ್ನು ಗಮನಿಸಿ, ನಾಳೆಯಿಂದ ಕರ್ನಾಟಕದ ಬಸ್ಸುಗಳು ಮಹಾರಾಷ್ಟ್ರಕ್ಕೆ ಕಳಿಸುವಂತೆ ಮನವಿ ಮಾಡಿಕೊಂಡರು.

ಕೋಲಾಪುರ ಜಿಲ್ಲೆಯ ಕುರುಂದವಾಡ ಬಸ್ ಚಾಲಕ ಲಡ್ಡುಕಾಂತ ಬಾಂಡಾರ ಮಾತನಾಡಿ, ಈಗಾಗಲೇ ಮಹಾರಾಷ್ಟ್ರದಲ್ಲಿ ಬಸ್ಗಳಿಗೆ ತೊಂದರೆ ನೀಡುವುದು ಸ್ಥಗಿತಗೊಂಡಿದೆ ಇದರಿಂದ ನಾವು ಕರ್ನಾಟಕದಲ್ಲಿ ಬಂದು ಹೋಗಿದ್ದೇವೆ. ಇಲ್ಲಿಯ ಜನರಿಂದ ಒಳೆಯ ಸಹಕಾರ ಸಿಗುತ್ತಿದೆ. ಯಾವುದೇ ತೊಂದರೆ ಆಗದಂತೆ ಮಹಾರಾಷ್ಟ್ರದವರು ನೋಡಿಕೊಳ್ಳುತ್ತಿದ್ದಾರೆ ಎಂದರು .

ಭುದವಾರ ರಂದು ಮತ್ತೆ ಕಾಗವಾಡದಿಂದ ಮಿರಜ್ ಪಟ್ಟಣಕ್ಕೆ ಖಾಸಗಿ ವಾಹನದವರು ಅಧಿಕ ಹಣ ತೆಗೆದುಕೊಂಡು ಸಂಚಾರ ಸೇವೆ ಪ್ರಾರಂಭಿಸಿದರು, ಇದರಿಂದ ಅನೇಕ ಪ್ರಯಾಣಿಕರು ಅಧಿಕಾರಿಗಳೊಂದಿಗೆ ವಾದವಿವಾದ ಮಾಡಿದರು. ಈ ವೇಳೆ ಕಾಗವಾಡ ಬಸ್ ನಿಲ್ದಾಣದ ನಿಯಂತ್ರಕ ಎಸ್.ಬಿ.ಗಸ್ತಿ, ಎಸ್.ಜಿ.ಪಾಂಡವ ಉಪಸ್ಥಿತರಿದ್ದರು.

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: