Uncategorized

ಕಾರ್ತಿಕ ಮಾಸ, ನೀರಲಕಟ್ಟಿ ಗ್ರಾಮದಲ್ಲಿ ಗೋಪೂಜೆ ಹಾಗೂ ದೀಪೋತ್ಸವ

Share

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಧಾರವಾಡತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ರಾಷ್ಟೊತ್ಥಾನ ವಿದ್ಯಾಕೇಂದ್ರದ ವತಿಯಿಂದ ಗೋಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ನೀರಲಕಟ್ಟಿ ಗ್ರಾಮದ ಶಾಲೆಯ ಆವರಣದಲ್ಲಿ ಇರುವ ವಿದ್ಯಾಗಣಪತಿ ದೇವಸ್ಥಾನ, ಕರಿಯಮ್ಮ ದೇವಿ ದೇವಸ್ಥಾನ ಹಾಗೂ ನಾಗದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಯ ಭಕ್ತಿ ಭಾವದಿಂದ ದೀಪೋತ್ಸವ ಕಾರ್ಯಕ್ರಮ ನಡೆಯಿತು.

ರಾಷ್ಟೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಗೋಮಾತೆಗೆ ಪೂಜೆ ಸಲ್ಲಿಸಿ, ದೀಪೋತ್ಸವ ನೇರವೇರಿಸಿ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

Tags: