ಖಾನಾಪೂರ ತಾಲೂಕಿನ ತೋಪಿನಕಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ಯಾವುದೇ ಒಂದು ವಿಷಯಕ್ಕೆ ವ್ಯತ್ಯಯದಿಂದಾಗಿ ಮಾತಿಗೆ ಮಾತು ಬೆಳೆದು ಸಂಘರ್ಷ ನಿರ್ಮಾಣವಾಗಿತ್ತು.
ವೈಸ್ ಓವರ್
ರಾತ್ರಿ ನಡೆದ ಘಟನೆಯಂತೆ ಇಂದು ಬೆಳಗ್ಗೆ ಕೂಡಾ ಎರಡು ಗುಂಪುಗಳ ನಡುವೆ ಸಂಘರ್ಷ ಮುಂದೆ ನಡೆದಿದ್ದು,ಶಾಸಕ ವಿಠ್ಠಲ ಹಲಗೇಕರ ಅವರು ತೋಪಿನಕಟ್ಟಿ ಗ್ರಾಮಕ್ಕೆ ತೆರಳಿ ಎಲ್ಲರನ್ನೂ ಸಮಜಾಯಿಸುವ ಕಾರ್ಯ ಮಾಡಿದ್ದು ಪೋಲಿಸ್ ಇಲಾಖೆಯ ಅಧಿಕಾರಿಗಳು ಕೂಡ ತೋಪಿನಕಟ್ಟಿ ಗ್ರಾಮದಲ್ಲಿ ಬೀಡುಬಿಟ್ಟಿದ್ದರು ಯಾವುದೇ ರೀತಿಯ ಹೆಚ್ಚಿನ ಅನಾಹುತವಾಗದಂತೆ ನಿಗಾವಹಿಸಿದ್ದಾರೆ ಒಟ್ಟಿನಲ್ಲಿ ಎರಡು ಗುಂಪುಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆದು ಸ್ವಲ್ಪ ಮಟ್ಟಿಗೆ ಎರಡು ಕಡೆಯಿಂದ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ.ಸದ್ಯಕ್ಕೆ ಖಾನಾಪೂರ ತಾಲೂಕಿನ ತೋಪಿನಕಟ್ಟಿ ಗ್ರಾಮ ಬೂದಿ ಮುಚ್ಚಿದ ಕೆಂಡ ದಂತಾಗಿದೆ ಪೋಲಿಸ್ ಇಲಾಖೆಯ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಅಲ್ತಾಫ್ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
Uncategorized
ತೋಪಿನಕಟ್ಟಿಯಲ್ಲಿ ಗುಂಪುಗಳ ನಡುವೆ ಸಂಘರ್ಷ: ಕಲ್ಲು ತೂರಾಟ
