ಖಾನಾಪೂರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತಾ ಇರುವ ಲಾಯನ್ಸ್ ಕ್ಲಬ್ ವು ಶಾಲಾ ಮಕ್ಕಳ ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಲಾಯನ್ಸ್ ಕ್ಲಬ್ ಪದಾಧಿಕಾರಿಯಾದ ಅಜಿತ್ ಪಾಟೀಲರು ತಮ್ಮ ಲಾಯನ್ಸ್ ಕ್ಲಬ್ ವತಿಯಿಂದ ಮರಾಠಿ ಶಾಲಾಕರಂಬಳದಲ್ಲಿ ಶಾಲಾ ಮಕ್ಕಳ ದಂತ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು ಮಕ್ಕಳ ದಂತಗಳ ತಪಾಸಣೆ ತಜ್ಞ ವೈದ್ಯರಾದ ಡಾಕ್ಟರ್ ಹೇಡವಾಡಕರ ಅವರು ಮಕ್ಕಳಗೆ ದಂತಗಳನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳಬೇಕೆಂದು ತಿಳಿಹೇಳಿದರು.ಅವರ ಜೋತೆ ಆಗಮಿಸಿದ ಇನ್ನಿತರರು ಮಕ್ಕಳಿಗೆ ಬ್ರಶ್ ಮಾಡುವ ವಿಧಾನವನ್ನು ತಿಳಿಸಿ ಪ್ರತಿದಿನವೂ ಪರಿಪಾಲನೆ ಮಾಡುವಂತೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ತೂಟ್ ಪೇಸ್ಟ್ ಮತ್ತು ಬ್ರಶ್ ಕೀಟ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಲಾಯನ್ಸ್ ಕ್ಲಬ್ ಪದಾಧಿಕಾರಿಗಳಾದ ಬಾಬು ಚವಾಣ್, ಸದಾನಂದ ಮನಸೈಕರ ಸೇರಿದಂತೆ ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು.ಒಟ್ಟಿನಲ್ಲಿ ಒಂದಲ್ಲಾ ಒಂದು ಸಾಮಾಜಿಕ ಸೇವೆ ಖಾನಾಪೂರದ ಲಾಯನ್ಸ್ ಕ್ಲಬ್ ಪದಾಧಿಕಾರಿಗಳಿಂದ ನಡೆಯುತ್ತಿರುವುದು ಸ್ವಾಗತಾರ್ಹ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ