Uncategorized

ಖಾನಾಪೂರದ ಗ್ರಾಮಗಳ ರಸ್ತಗಳ ದುರುಸ್ಥಿ ಮಾಡುವಂತೆ ಶಾಸಕ ವಿಠ್ಠಲ ಹಲಗೇಕರ ಮನವಿ

Share

ಖಾನಾಪೂರ ತಾಲೂಕಿನ ಬಹು ಗ್ರಾಮಗಳ ಜಾತ್ರೆಗಳು ಬರುವುದರಿಂದ ರಸ್ತಗಳ ದುರುಸ್ಥಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯತ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸೇರಿದಂತೆ ಇನ್ನಿತರಿಗೆ ಶಾಸಕ ವಿಠ್ಠಲ ಹಲಗೇಕರ ಅವರು ಮನವಿ ಮಾಡಿದರು

ಖಾನಾಪೂರ ತಾಲೂಕಿನ ತಿವೋಲಿ,ನೆಸರೇ,ಕಕ್ಕೇರಿ, ಮಾಡಿಗುಂಜಿ,ಮಡವಾಳ ಸೇರಿದಂತೆ ಇನ್ನಿತರ ಗ್ರಾಮಗಳ ಜಾತ್ರೆಗಳು ಇರುವುದರಿಂದ ಗ್ರಾಮಗಳ ಹಾಳಾಗಿರುವ ರಸ್ತೆಗಳು ಸೇರಿದಂತೆ ಆ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ ಜಾತ್ರೆಗಳಿಗೆ ಬರುವ ಭಕ್ತಾದಿಗಳಿಗೆ ಗ್ರಾಮಸ್ಥರಿಗೆ ಅನುವು ಮಾಡಿಕೊಡಬೇಕೆಂದು ಬೆಳಗಾವಿಯ ಜಿಲ್ಲಾ ಪಂಚಾಯತ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳನ್ನು ಶಾಸಕ ವಿಠ್ಠಲ ಹಲಗೇಕರ ಅವರು ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಿದರು ಇದಕ್ಕೆ ಈ ಎರಡು ಇಲಾಖೆಯ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಯೋಗ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: