Uncategorized

ನೂತನ ಎಸಿಎಫ್ ಮತ್ತು ಆರ್ ಎಫ್ಒ ಅಧಿಕಾರಿಗಳನ್ನು ಸ್ವಾಗತಿಸಿದ ಮಧು ಗವಳೇಕರ

Share

ಖಾನಾಪೂರ ತಾಲೂಕಿನ ನಾಗರಗಾಳಿಯ ನೂತನ ಎಸಿಎಫ್ ಆಗಿ ಎಮ್‌‌.ಬಿ.ಕುಸ್ಸನಾಳ್ಳ್ ಹಾಗೂ ಆರ್ ಎಫ್ಒ ಆಗಿ ಪಿ.ಎಮ್.ಜೈನ್ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಧು ಗವಳೇಕರ ಅವರು ಈ ಇಬ್ಬರು ಅಧಿಕಾರಿಗಳನ್ನು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.

ನಾಗರಗಾಳಿ ಪ್ರದೇಶ ಅತ್ಯಂತ ದಟ್ಟ ಪ್ರದೇಶವಾಗಿದ್ದು ಅರಣ್ಯ ಸಂರಕ್ಷಣೆಗೆ ಅಗತ್ಯವಾದ ಸಹಕಾರ ನೀಡುವುದಾಗಿ ಮಧು ಗವಳೇಕರ ಈ ಸಂದರ್ಭದಲ್ಲಿ ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಗೌತಮ್ ಪಾಟೀಲ್,ಯಲಪ್ಪ ಜುವೇಕರ, ಸಂತೋಷ ಕವಳೇಕರ, ಪ್ರೀತಮ್ ದಳವಿ, ಸುನೀಲ್ ಕವಳೇಕರ, ಸಂದೀಪ್ ದೇಸುರಕರ, ಗಿರೀಶ್ ಗೋಧಳ,ಸ್ಪನೀಲ್ ಕವಲೇಕರ, ಸತೀಶ್ ಕವಲೇಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಲ್ತಾಫ್ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: