Uncategorized

ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಎಂಟನೇ ಅದ್ಭುತ: ಮುನಿರತ್ನ ವ್ಯಂಗ್ಯ

Share

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಬೆಳಗಾವಿಯಲ್ಲಿ ಸ್ವಾಗತಿಸಲು ಸತೀಶ್ ಜಾರಕಿಹೊಳಿ (Satish Jarkiholi) ಹೋಗದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೋಗದಿರುವುದು ಎಂಟನೇ ಅದ್ಭುತ ಎಂದು ಶಾಸಕ ಮುನಿರತ್ನ (Munirathna) ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮತ್ತೆ ಬಣ ರಾಜಕೀಯ ಶುರುವಾಗಿದೆ. ಅಲ್ಲಿ ರಾಜಕಾರಣ ಶುರುವಾದಾಗಲೆಲ್ಲ ಸರ್ಕಾರಗಳಿಗೆ ಗಂಡಾಂತರ ಬಂದಿದೆ. ಸಮ್ಮಿಶ್ರ ಸರ್ಕಾರ ಉರುಳಿದ್ದೇ ಅಲ್ಲಿನ ರಾಜಕಾರಣದಿಂದ. ಅಲ್ಲಿ ಶುರುವಾಗಿ ರಾಜ್ಯ ರಾಜಧಾನಿಯಲ್ಲಿ ಮುಕ್ತಾಯಗೊಳ್ಳುತ್ತದೆ ಎಂದಿದ್ದಾರೆ

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನನ್ನ ಕ್ಷೇತ್ರಕ್ಕೆ 126 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಈಗಿನ ಸರ್ಕಾರ ಅದನ್ನು ವಾಪಸ್ ಪಡೆದು ಬೇರೆ ಕ್ಷೇತ್ರಗಳಿಗೆ ನೀಡಿದೆ. ನಮ್ಮ ಅನುದಾನ ಬೇರೆ ಕ್ಷೇತ್ರಗಳಿಗೆ ಹೇಗೆ ಕೊಡ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಬೆಳಗಾವಿಯಲ್ಲಿ ಸ್ವಾಗತಿಸಲು ಸತೀಶ್ ಜಾರಕಿಹೊಳಿ (Satish Jarkiholi) ಹೋಗದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೋಗದಿರುವುದು ಎಂಟನೇ ಅದ್ಭುತ ಎಂದು ಶಾಸಕ ಮುನಿರತ್ನ (Munirathna) ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮತ್ತೆ ಬಣ ರಾಜಕೀಯ ಶುರುವಾಗಿದೆ. ಅಲ್ಲಿ ರಾಜಕಾರಣ ಶುರುವಾದಾಗಲೆಲ್ಲ ಸರ್ಕಾರಗಳಿಗೆ ಗಂಡಾಂತರ ಬಂದಿದೆ. ಸಮ್ಮಿಶ್ರ ಸರ್ಕಾರ ಉರುಳಿದ್ದೇ ಅಲ್ಲಿನ ರಾಜಕಾರಣದಿಂದ. ಅಲ್ಲಿ ಶುರುವಾಗಿ ರಾಜ್ಯ ರಾಜಧಾನಿಯಲ್ಲಿ ಮುಕ್ತಾಯಗೊಳ್ಳುತ್ತದೆ ಎಂದಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನನ್ನ ಕ್ಷೇತ್ರಕ್ಕೆ 126 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಈಗಿನ ಸರ್ಕಾರ ಅದನ್ನು ವಾಪಸ್ ಪಡೆದು ಬೇರೆ ಕ್ಷೇತ್ರಗಳಿಗೆ ನೀಡಿದೆ. ನಮ್ಮ ಅನುದಾನ ಬೇರೆ ಕ್ಷೇತ್ರಗಳಿಗೆ ಹೇಗೆ ಕೊಡ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ಕ್ಷೇತ್ರದ ಕಾಮಗಾರಿಗಳ ಪಟ್ಟಿಯನ್ನು ಡಿಸಿಎಂ ಕೇಳಿದ್ದರು. ನಾನು ಆ ವಿವರವನ್ನು ಸಲ್ಲಿಸಿದ್ದೇನೆ. ಡಿ.ಕೆ ಶಿವಕುಮಾರ್ ಅವರ ಬಗ್ಗೆ ನನಗೆ ನಂಬಿಕೆ ಇದೆ. ಅನುದಾನ ವಾಪಾಸ್ ಬಂದೇ ಬರುತ್ತದೆ. ಅನುದಾನ ವಾಪಸ್ ಬರದಿದ್ದರೆ ಮುಂದೆ ಏನು ಮಾಡಬೇಕೆಂದು ತಿಳಿಸುತ್ತೇನೆ. ಅದಕ್ಕಾಗಿ ಮತ್ತೆ ಪ್ರತಿಭಟನೆ ಮಾಡುವುದಾಗಲಿ, ಕಾಲು ಹಿಡಿಯುವುದಾಗಲಿ ಮಾಡುವುದಿಲ್ಲ ಎಂದಿದ್ದಾರೆ

Tags:

Lakshmi Hebbalkar not going to DK's reception is eighth wonder: Munirat's irony