ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ನಿಲಜಿ ಗ್ರಾಮದ ಅಲೌಕಿಕ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ಶಿವಾನಂದ ಗುರೂಜಿಯವರ ಆಶೀರ್ವಾದ ಪಡೆದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ನಿಲಜಿ ಗ್ರಾಮದ ಅಲೌಕಿಕ ಧ್ಯಾನ ಮಂದಿರದ ಶಿವಾನಂದ ಗುರೂಜಿಯವರು ಸತ್ಕರಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಗುರೂಜಿಯವರು ಲಕ್ಷ್ಮಿ ಹೆಬ್ಬಾಳಕರ ಅವರು ಮೊದಲಿನಿಂದಲೂ ಆಶ್ರಮಕ್ಕೆ ಬರುತ್ತಾರೆ ಈ ಹಿಂದೆ ಅವರು ಶಾಸಕಿಯಾಗುವ ಮೊದಲು ಆಶ್ರಮಕ್ಕೆ ಭೇಟಿ ನೀಡಿದಾಗ ನಾನು ಹೇಳಿದ್ದೆ ನಿನಗೆ ಭವಿಷ್ಯವಿದೆ ಚಿಂತೆ ಮಾಡಬೇಡಾ ಎಂದಿದ್ದೆ ಆಗ ನಡೆದ ಚುನಾವಣೆಯಲ್ಲಿ ಅಧಿಕ ಮತ ಪಡೆದು ವಿಜಯಶಾಲಿಯಾಗಿದ್ದರು.
ನಿಲಜಿ ಆಶ್ರಮ ಬೆಳೆಯಲು ಲಕ್ಷ್ಮಿ ಹೆಬ್ಬಾಳಕರ್ ಪರಿಶ್ರಮ ಅಪಾರವಿದೆ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಕೂಡಾ ವಿಧಾನ ಪರಿಷತ್ತ್ ಸದಸ್ಯನಾಗಿ ನೂರಾರು ಜವಾಬ್ದಾರಿ ಇದ್ದರು ಆಶ್ರಮದ ಅಭಿವೃದ್ಧಿಗೆ ಸಹಕರಿಸಿದ್ದಾರೆ .
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಚಿವೆ ಶಾಸಕಿ ಅನ್ನುವುದಕ್ಕಿಂತ ನನ್ನ ಮಗಳು ಎಂದು ಹೇಳಲು ಖುಷಿಯಾಗುತ್ತೆ ನಮ್ಮ ಗುರುಗಳು ಹೇಳಿದ್ದರು ಲಕ್ಷ್ಮೀ ಹೆಬ್ಬಾಳಕರ್ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದರು ಇವಾಗ ಸಚಿವರಾಗಿದ್ದಾರೆ , ಮುಖ್ಯಮಂತ್ರಿಯಾಗಲು ಒಂದೇ ಸ್ಪೆಪ್ ಬಾಕಿ ಇದೆ ಆದಷ್ಟು ಬೇಗಾ ಮುಖ್ಯಮಂತ್ರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ನಿಲಜಿ ಗ್ರಾಮದ ಅಲೌಕಿಕ ಧ್ಯಾನ ಮಂದಿರದ ನೂರಾರು ಭಕ್ತರು, ಮುಖಂಡರು ಉಪಸ್ಥಿತರಿದ್ದರು.