ಶ್ರೀ ರಾಮನ ಮೇಲಿನ ಹನುಮನ ಭಕ್ತಿ, ಶ್ರದ್ಧೆ, ಶಕ್ತಿ,ಸಾಹಸಗಳು ಪ್ರತಿಯೊಬ್ಬ ಭಾರತೀಯ ಹಿಂದೂ ಪ್ರಜೆಯಲ್ಲೂ ಇರಲಿ ಎಂದು ವಿ.ಹಿಂ.ಪ ಪ್ರಾಂತ ಕೋಶಾಧ್ಯಕ್ಷ ಕೃಷ್ಣಭಟ್ಟ ಹೇಳಿದರು. ಅವರು ಮಂಗಳವಾರ ನಗರದ ಕಾರಂಜಿ ಶ್ರೀಗಳಿಂದ ಪೂಜೆ ಸಲ್ಲಿಸಿ ಶೌರ್ಯ ರಥ ಯಾತ್ರೆಯ ಉದ್ಘಾಟನೆ ನಂತರ ಬ್ರಹತ್ ದೇಶ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ದೇಶಕ್ಕಾಗಿ ತನು,ಮನ,ಧನ ಸೇರಿದಂತೆ ಭದ್ರತೆಗಾಗಿ ಸಂಘಟಿತರಾಗಿ, ಹಿಂದುತ್ವದ ಶಕ್ತಿ ನಾವಾಗೋಣ ಎಂದರು. ಸಾನಿಧ್ಯ ವಹಿಸಿದ್ದ ಕಾರಂಜಿ ಶ್ರೀಗಳು ರಥ ಯಾತ್ರೆಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ವಿ.ಹಿಂ. ಪ. ಜಿಲ್ಲಾದ್ಯಕ್ಷ ಭಾವುಕಣ್ಣಾ ಲೋಹಾರ ಮಾತನಾಡಿ, ಈ ಶೌರ್ಯ ಶೋಭಾ ರಥ ಯಾತ್ರೆಯ ಉದ್ದೇಶ, ಮತ್ತು ಕಾರ್ಯದ ಬಗ್ಗೆ ಕಾರ್ಯಕರ್ತರು ತಿಳಿ ಹೇಳುವದಾಗಬೇಕಲ್ಲದೆ , ಹಿಂದೂ ಸಮಾಜದ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಶಕ್ತಿಯಾಗೋಣ . ಶ್ರೀರಾಮನ ಫೋಟೋ ,ಮಂತ್ರಾಕ್ಷತೆ, ಮತ್ತು ಪ್ರಸಾದ ಗಳನ್ನು ವಿ.ಹಿಂ. ಪ. ಕಾರ್ಯಕರ್ತರು ಪ್ರತಿ ಮನೆ,ಮನೆಗೂ ಮುಟ್ಟಿಸುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಶೋಭಾ ಶೌರ್ಯ ರಥ ಯಾತ್ರೆ ಬೆಳಗಾವಿಗೆ ಬರುತ್ತಿದ್ದಂತೆ ವಿವಿಧ ಹಿಂದೂ ಸಂಘಟನೆಗಳಿಂದ ಭವ್ಯ ಸ್ವಾಗತ ದೊರೆಯಿತು. ರಥ ಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಶಾಹೂ ನಗರ, ಪೀರನವಾಡಿ, ಶಹಾಪುರ, ಟಿಲಕವಾಡಿ, ಕಂಗ್ರಾಳಿ, ಕಡೋಲಿ, ಕಾಕತಿ,ಹೊನಗಾ, ಯಮನಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭವ್ಯ ಸ್ವಾಗತ ದೊರೆಯಿತು.
ರಥ ಯಾತ್ರೆಯಲ್ಲಿ, ಹಿಂದೂ ಯುವಕ, ಯುವತಿಯರ ಲೇಜಮ್ ಕವಾಯಿತು ಆಕರ್ಷಕವಾಗಿ ಮೂಡಿ ಬಂದಿತ್ತು. ಯಾತ್ರೆಯ ನೇತ್ರತ್ವವನ್ನು ಮಾಜಿ ಶಾಸಕ ,ಅನಿಲ ಬೆನಕೆ,ಬೆಳಗಾವಿ ಮಹಾ ಪೌರ, ಶೋಭಾ ಸೋಮನಾಚೆ, ಉಪ ಮಹಾಪೌರ ರೇಷ್ಮಾ ಪಾಟೀಲ, ಧುರೀಣರಾದ ಪ್ರದೀಪ ವಾಗಮೂರೆ, ಶ್ರೀಕಾಂತ ಕದಮ್, ಬಾರ್ ಅಧ್ಯಕ್ಷ, ಪ್ರಭು ಯತ್ನಟ್ಟಿ, ಕಾರ್ಪೊರೇಟರಗಳು, ಹಿಂದೂ ಕಾರ್ಯಕರ್ತರು, ಅಭಿಮಾನಿಗಳು, ಯುವಕ, ಯುವತಿಯರು ಉಪಸ್ಥಿತರಿದ್ದರು.
ವರದಿ, ಸುರೇಶ್ ಉರಬಿನಹಟ್ಟಿ
Uncategorized
ಹನುಮನ ಮೇಲೆ ಭಕ್ತಿ, ಶ್ರದ್ಧೆ, ಶಕ್ತಿ ಪ್ರತಿ ದೇಶ ಭಕ್ತ ರಲ್ಲೂ ಇರಲಿ :ಕೃಷ್ಣ ಭಟ್ ಅಭಿಮತ.
