ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಹಾನಾಯಕ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಆಡಳಿತ ಚುಕ್ಕಾಣೆ ಹಿಡಿದ ನೀಮಿತ್ಯವಾಗಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಬಿಜೆಪಿ ಪಕ್ಷದ ಮುಖಂಡರಾದ ಪಿಕೆಪಿಎಸ್ ಅಧ್ಯಕ್ಷ ಶೀತಲ್‍ಗೌಡಾ ಪಾಟೀಲ್ ಇವರ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ ಹಾರಿಸಿ, ಸಿಹಿ ಹಂಚುವ ಮುಖಾಂತರ ವಿಜಯೋತ್ಸವ ಆಚರಿಸಿದರು
ರವಿವಾರ ಮಧ್ಯಾನ ಉಗಾರದ ಪದ್ಮಾವತಿ ಮಂದಿರ್ ಮುಂಭಾಗದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಒಂದುಗೂಡಿ ಸಂಭ್ರಮ ಆಚರಿಸಿದರು.
ಉಗಾರ್ ಪಿಕೆಪಿಎಸ್ ಅಧ್ಯಕ್ಷ ಶೀತಲ್‍ಗೌಡಾ ಪಾಟೀಲ್ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಬಹುಮತ ಸಿಕ್ಕಿದೆ ನರೇಂದ್ರ ಮೋದಿ ಮತ್ತು ದೇಶದ ಗೃಹ ಸಚಿವ ಅಮಿತ್ ಷಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇವರ ನೇತೃತ್ವದಲ್ಲಿ ವಿಜಯ ಸಾಧಿಸಿದೆ ಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರ ಸೇರಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ ಜಯವಾಗಲಿದೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಾದ ವೃಷಭ ಪಾಟೀಲ್, ಪದ್ಮಣ್ಣಾ ಚೌಗುಲೆ, ಅಮೀನ್ ಶೇಕ್, ದೀಲಾವರ ನೇಜಕರ, ಸಂಗಪ್ಪ ಪಡಗನವರ್, ನಜೀರ ಪಟಾಣ, ರಾಜು ವಿರೊಜೆ, ರಾವಸಾಹೇಬ ಗಿಡ್ಡಸಕನ್ನವರ್, ಪ್ರಶಾಂತ ವಸವಾಡೆ,ಅಭಿಷೇಕ ಚೌಗುಲೆ, ಅಪ್ಪಾಸಾಹೇಬ್ ಸನದಿ, ಬಂಡು ಸನದಿ, ದಾದಾಪಿರ ನೇಜಕರ ಮುಂತಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುಕುಮಾರ ಬನ್ನೂರೆ
ಇನ್ ನ್ಯೂಜ್ ಕಾಗವಾಡ