ರಾಜಸ್ಥಾನ , ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರ ಗದ್ದುಗೆ ಏರಿದ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಶಹಾಪುರದ ಶಿವಾಜಿ ಉದ್ಯಾನ ಬಳಿ ಸಂಭ್ರಮಾಚರಣೆ ಮಾಡಲಾಯಿತು
ರಾಜಸ್ಥಾನ,ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ವಿಜಯ ಸಾದಿಸಿದ ಸಂಭ್ರಮದಲ್ಲಿ ಶಾಸಕ ಅಭಯ ಪಾಟೀಲ್ ಡೋಳ್ಳು ಬಾರಿಸಿ, ಬಿಜೆಪಿ ಧ್ವಜ ಹಿಡಿದು ವಿಜಯೋತ್ಸವದಲ್ಲಿ ಹರ್ ಹರ್ ಮೋದಿ ಘರ್ ಘರ್ ಮೋದಿ ಅಂತಾ ಘೋಷಣೆಗಳು ಮೊಳಗಿದವು.
ಶಾಸಕ ಅಭಯ ಪಾಟೀಲ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ರಾಜಸ್ಥಾನ,ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ಕಮಲ ಅರಳಿದೆ ಇಡೀ ದೇಶದ ಜನರಿಗೆ ಅತೀವ ಸಂತಸ ಆಗಿದೆ ರಾಜಸ್ಥಾನ , ಛತ್ತಿಸಗಡ್, ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷ ವಿಜಯ ಸಾಧಿಸಿದೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಮೋದಿ ಅವರ ವರ್ಚಸ್ಸ ಕಡಿಮೆ ಆಗುವ ಮಾತಿಲ್ಲ ವರ್ಚಸ್ಸ್ ಇನ್ನು ಹೆಚ್ಚಾಗಿದೆ ನಾನು ಛತ್ತಿಸಗಡದಲ್ಲಿ ೧೦ ದಿನಗಳ ಕಾಲ ಪ್ರವಾಸ ಮಾಡಿ ಮೋದಿ ಅವರ ಕೈ ಬಲ ಪಡಿಸಲು ಪ್ರಯತ್ನ ಮಾಡಿದ್ದೆ ಈ ಗೆಲುವು ಮೋದಿ ಅವರಿಗೆ ಸಲ್ಲುತ್ತದೆ ಅಮಿತಾ ಷಾ ಅವರು , ಬಿ ಎಲ್ ಸಂತೋಷ ಸೇರಿದಂತೆ ಹಲವು ನಾಯಕರು ನಮಗೆ ಮಾರ್ಗದರ್ಶನ ಮಾಡಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಶ್ರಮಿಸಿದ್ದಾರೆ .
ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಶತಸಿದ್ಧ ,ಜನರು ಮೋದಿ ಅವರ ಜೊತೆಗಿದ್ದಾರೆ. ಕಾಂಗ್ರೆಸ ಪಕ್ಷ ಪಣವತಿ ಇದೆ ಎಂದು ಕಾಂಗ್ರೆಸ ವಿರುದ್ಧ ವಾಗ್ದಾಳಿ ನಡೆಸಿದರು .
ಈ ಸಂದರ್ಭದಲ್ಲಿ ಮೇಯರ ಶೋಬಾ ಸೊಮನಾಚೆ ಸೇರಿದಂತೆ ಹಲವು ಬಿಜೆಪಿ ಪಕ್ಷದ ಮುಖಂಡರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು