ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಜಾತ್ಯಾತೀತ ಜನತಾದಳದ ಜಾತ್ಯತೀತತೆ ಕಾಪಾಡಲು ನಿರ್ಣಯ ತೆಗೆದುಕೊಂಡಂತೆ ಕಾಣುತ್ತದೆ, ಸಿಎಂ ಇಬ್ರಾಹಿಂ ಅಧ್ಯಕ್ಷತೆಯ ಜಾತ್ಯತೀತ ಜನತಾದಳ ಅಧಿಕೃತವೋ, ಇನ್ನೊಂದು ಅಧಿಕೃತವೋ ನೋಡಬೇಕು ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜೆಡಿಎಸ್ ಬಿಜೆಪಿ ಮೈತ್ರಿಗೆ ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ನಿಡೋದಾಗಿ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ ಎಂದರು. ಇನ್ನೂ ಜೆಡಿಎಸ್ ಒಡಕು ಕಾಂಗ್ರೆಸ್ ಗೆ ಲಾಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಜೆಡಿಎಸ್ ಹಾಗೂ ಬಿಜೆಪಿ ಒಡೆಯಲಾರದ ವೇಳೆಯೂ ನಮಗೆ ಅನುಕೂಲವಾಗಿದೆ. ನಮ್ಮ ಪಕ್ಷ ಇವರ್ಯಾರ ಮೇಲೆಯೂ ಅವಲಂಬಿತವಾಗಿಲ್ಲ, ನಮ್ಮ ಪಕ್ಷ ಜನರ ಮೇಲೆ ಅವಲಂಬಿತವಾಗಿದೆ ಜನರ ಆಶೀರ್ವಾದ ಮಾಡಿದರೆ ಆಯ್ಕೆಯಾಗಿ ಬರುತ್ತೇವೆ ಎಂದು ಸ್ಪಷ್ಟಪಡಿಸಿದರು. ರಾಜ್ಯಾದ್ಯಕ್ಷ ಸ್ಥಾನದಿಂದ ನನ್ನನ್ನು ಉಚ್ಛಾಟನೆ ಮಾಡಲಾಗಲ್ಲಾ ಎಂದು ಸಿ ಎಂ ಇಬ್ರಾಹಿಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಜೆಡಿಎಸ್ ಪಕ್ಷದ ಬೈಲಾ ನನಗೆ ಗೊತ್ತಿಲ್ಲ,ಅವರ ಪಕ್ಷದ ಬಗ್ಗೆ ಕೇಳಿದರೆ ನಾನೇನು ಹೇಳಲಿ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಪ್ರಶ್ನಿಸಿದರು. ಅದು ಅವರ ಪಕ್ಷದ ಆಂತರಿಕ ವಿಚಾರ ಸಿಎಂ ಇಬ್ರಾಹಿಂ ಬುದ್ದಿವಂತರಿದ್ದಾರೆ ಎಂದು ಹೇಳಿದರು. ಮೋದಿ ಅವರನ್ನ ಮತ್ತೆ ಆಯ್ಕೆ ಮಾಡಿದರೆ ನಾವೆಲ್ಲ ಉಳಿಯುತ್ತೇವೆ ಎಂದು ಮಹಾಲಿಂಗೇಶ್ವರ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಅವರ ವೈಯಕ್ತಿಕ ಅಭಿಪ್ರಾಯ, ಆ ಸ್ವಾಮೀಜಿಗಳಿಗೆ ಹಾಗೆ ಅನಿಸಿರುತ್ತದೆ ಬೇರೆ ಸ್ವಾಮೀಜಿಗಳಿಗೆ ಹಾಗೆ ಅನಿಸಲ್ಲ ಎಂದು ಹೇಳಿದರು. ಸ್ವಾಮೀಜಿಗಳು ಸಹ ಈ ರೀತಿ ಮಾತನಾಡುವುದು ಎಷ್ಟು ಔಚಿತ್ಯ ಎಂದು ಭಕ್ತರು ನಿರ್ಧಾರ ಮಾಡಬೇಕು ಎಂದು ಎಂ.ಬಿ.ಪಾಟೀಲ ತಿಳಿಸಿದರು.