ವಾರಕರಿ ಪಂಥವು ವಿಶ್ವದ ಅತ್ಯುತ್ತಮ ಪಂಥವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಲ್ ಇ ಸಂಸ್ಥೆಯ ಸಂಚಾಲಕ ಮಹಾಂತೇಶ ಕವಟಗಿಮಠ ಹೇಳಿದರು
ನೇತಾಜಿ ಯುವ ಅಸೋಸಿಯೇಷನ್ ಯಳ್ಳೂರಿನ ನೇತಾಜಿ ಮರಾಠಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಸಂಗೀತ ಭಜನಾ ಸ್ಪರ್ಧೆಯನ್ನು ಮಹಾಂತೇಶ ಕವಟಗಿಮಠ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಜನತೆಗೆ ಉತ್ತಮ ಸಂಸ್ಕಾರ ನೀಡಲು ಇಂತಹ ಸಂಗೀತ ಭಜನಾ ಸ್ಪರ್ಧೆಗಳನ್ನು ಆಯೋಜಿಸುವುದು ಅತೀ ಅವಶ್ಯವಾಗಿದೆ ಎಂದರು. ಶೂನ್ಯದಿಂದ ವಿಶ್ವವನ್ನೇ ಸೃಷ್ಟಿಸಿದ ನೇತಾಜಿ ಯುವ ಸಂಘಟನೆ ಆಯೋಜಿಸಿರುವ ಭಜನಾ ಸ್ಪರ್ಧೆ ಸಮಾಜಕ್ಕೆ, ಯುವಕರಿಗೆ ಮಾರ್ಗದರ್ಶನ ನೀಡುವುದರಲ್ಲಿ ಸಂಶಯವಿಲ್ಲ. ಇಂತಹ ಸ್ಪರ್ಧೆಗಳು ಇಂದು ನಮ್ಮ ಸಮಾಜಕ್ಕೆ ಅಗತ್ಯವಾಗಿದೆ ಎಂದು ಕವಟಗಿಮಠ ಹೇಳಿದರು. .
ಸ್ಪರ್ಧೆಯಲ್ಲಿ ಒಟ್ಟು 25 ಮಂಡಲಗಳು ಭಾಗವಹಿಸಿದ್ದು, ಎರಡು ದಿನಗಳ ಸ್ಪರ್ಧೆಯ ಮೊದಲ ದಿನ ಭಜನ ಮಂಡಲದವರು ವಿಶೇಷ ಭಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ನೇತಾಜಿ ಯುವ ಸಂಘಟನೆಯ ಅಧ್ಯಕ್ಷ ಕಿರಣ ಗಿಂಡೆ ಅಧ್ಯಕ್ಷತೆ ವಹಿಸಿದ್ದರು. ಯಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಮಾಸೇಕರ, ಉಪಾಧ್ಯಕ್ಷ ಪ್ರಮೋದ ಪಾಟೀಲ, ಉದ್ಯಮಿ ರಾಜೇಂದ್ರ ಮುತಗೇಕರ ದೀಪ ಬೆಳಗಿದರು. ಮಾಜಿ ಶಾಸಕ ಗುರುವರ್ಯ ಪರಶುರಾಮಭಾವು ನಂದಿಹಳ್ಳಿ ನೇತಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಜ್ಞಾನೇಶ್ವರ ಚಿತ್ರಕ್ಕೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಜೀತ ಪಾಟೀಲ, ತುಕಾರಾಂ ಮಹಾದೇವ ಕುಗ್ಗಿ ಪೂಜೆ ಸಲ್ಲಿಸಿದರು. ಎಂಜಿನಿಯರ್ ಹನ್ಮಂತ ಕುಗ್ಗಿ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಶಿವಾಜಿ ವಿದ್ಯಾಲಯದ ಪ್ರಧಾನ ಉಪನ್ಯಾಸಕ ಎಂ. ಬಿ.ಬಾಚಿಕರ್, ನೇತಾಜಿ ಸಮಾಜದ ಅಧ್ಯಕ್ಷ ಡಿ.ಜಿ. ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದುದ್ದಪ್ಪ ಬಾಗೇವಾಡಿ, ರೈತ ಸಮಾಜದ ಅಧ್ಯಕ್ಷ ದೀಪಕ ಕರ್ಲೇಕರ, ಉಪಾಧ್ಯಕ್ಷ ಶ್ರೀಧರ ಕಾಂಶಿಡೆ, ಉದ್ಯಮಿ ಪುಂಡ್ಲಿಕ್ ಪಾವಶೆ, ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಆರ್. ಪಾಟೀಲ, ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ನಿರ್ದೇಶಕ ಬಾಬಾಸಾಹೇಬ ಭೇಕಾಣೆ, ಸುನೀಲ ಅಷ್ಟೇಕರ, ಕವಟಗಿಮಠ ಸೊಸೈಟಿ ಅಧ್ಯಕ್ಷ ಶರದ್ ಕವಟಗಿಮಠ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.