Uncategorized

ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು

Share

ಅಪರಿಚಿತ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವನ ದೇಹ ಛಿಧ್ರ ಛಿದ್ರಗೊಂಡ ಘಟನೆ ನಗರದ ಹೊರವಲಯದ ಸಿಮ್ಲಾನಗರ ಬ್ರಿಜ್ ಬೈಪಾಸ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ.

ಮಲ್ಲೇಶ್ವರಂ ನಗರದ ನಿವಾಸಿ ವಿಜಯ ಹನುಮಂತಪ್ಪ ಪವಾರ (೫೮) ಎಂಬ ವ್ಯಕ್ತಿಯೇ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಬೆಳಗಿನ ಜಾವ ಭೀಕರವಾಗಿ ಈ ಘಟನೆ ಸಂಭವಿಸಿದ್ದು, ತನಿಖೆ ಬಳಿಕವಷ್ಟೇ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಘಟನಾ ಸ್ಥಳಕ್ಕೆ ಬೆಂಡಿಗೇರಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ. ದೊಡ್ಡಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Tags: