Uncategorized

ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ – ಖಜಾನೆಗೆ ಕೋಟಿ ಕೋಟಿ ನಷ್ಟ

Share

ಬೆಂಗಳೂರು: ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ (Karnataka) ಮದ್ಯ  (Liquor) ಮಾರಾಟ ಇಳಿಮುಖವಾಗಿದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುತ್ತಿದ್ದ ಇಲಾಖೆ ಭಾರೀ ನಷ್ಟದಲ್ಲಿದೆ. ಈ ಬೆಳವಣಿಗೆ ಅಬಕಾರಿ ಇಲಾಖೆಯ (Excise Department) ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ.

ಬೆಂಗಳೂರು: ಕಳೆದ ಮೂರು ತಿಂಗಳಿಂದ ರಾಜ್ಯದಲ್ಲಿ (Karnataka) ಮದ್ಯ  (Liquor) ಮಾರಾಟ ಇಳಿಮುಖವಾಗಿದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುತ್ತಿದ್ದ ಇಲಾಖೆ ಭಾರೀ ನಷ್ಟದಲ್ಲಿದೆ. ಈ ಬೆಳವಣಿಗೆ ಅಬಕಾರಿ ಇಲಾಖೆಯ (Excise Department) ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಬರೊಬ್ಬರಿ 5% ರಷ್ಟು ಮದ್ಯ ಮಾರಟ ಇಳಿಕೆ ಕಂಡಿದೆ. ಕಳೆದ ಜುಲೈ ತಿಂಗಳ ಬಳಿಕ ರಾಜ್ಯದಲ್ಲಿ ಮದ್ಯ ಖರೀದಿ ಇಳಿಕೆಯಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ನಷ್ಟವಾಗಿದೆ.

ಬೆಂಗಳೂರು ಬಾರ್ ಮಾಲೀಕರ ಸಂಘವೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಕೆಲ ತಿಂಗಳ ಹಿಂದಷ್ಟೇ ರಾಜ್ಯದಲ್ಲಿ 20% ಅಬಕಾರಿ ಸುಂಕವನ್ನ ಏರಿಕೆ ಮಾಡಲಾಗಿತ್ತು. ಇದು ಮದ್ಯ ಪ್ರಿಯರಿಗೆ ಶಾಕ್ ನೀಡಿತ್ತು. ಇದು ಮಾರಾಟದ ಇಳಿಕೆಗೆ ಕಾರಣ ಎಂಬುದು ಅವರ ವಾದ. ಅಲ್ಲದೇ ಹೊರ ರಾಜ್ಯಗಳಿಗೆ ವಿಮಾನದ ಮೂಲಕ ಪ್ರವಾಸಕ್ಕೆ ತೆರಳುವ ಜನ ಅಲ್ಲಿ ಕಡಿಮೆ ಬೆಲೆಗೆ ಸಿಗುವ ದುಬಾರಿ ಮದ್ಯವನ್ನು ತೆಗೆದುಕೊಂಡು ಬರುತ್ತಿದ್ದಾರೆ. ಇದು ಸಹ ಮದ್ಯ ಮಾರಾಟದಲ್ಲಿ ಇಳಿಕೆಯಾಗಲು ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಯಾವ ತಿಂಗಳಿನಲ್ಲಿ ಎಷ್ಟು?
ಆಗಸ್ಟ್ – 3096 ಕೋಟಿ ರೂ.
ಸೆಪ್ಟೆಂಬರ್ – 3273 ಕೋಟಿ ರೂ.

ಲಕ್ಷ ಕೇಸ್ ಬಾಕ್ಸ್ ಗಳಲ್ಲಿ
ಜುಲೈ – 66 ಲಕ್ಷ ಬಾಕ್ಸ್ – 29 ಲಕ್ಷ ಬಾಕ್ಸ್
ಆಗಸ್ಟ್ – 52.5 ಲಕ್ಷ ಬಾಕ್ಸ್ – 31.5ಲಕ್ಷ ಬಾಕ್ಸ್
ಸೆಪ್ಟೆಂಬರ್ – 57 ಲಕ್ಷ ಬಾಕ್ಸ್ – 31 ಲಕ್ಷ ಬಾಕ್ಸ್

ಈ ವರ್ಷದ ಸಾಲಿನ ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸುಮಾರು 180 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟ ಕಡಿಮೆಯಾಗಿರೋದು ಸ್ಪಷ್ಟವಾಗಿದೆ. ಸರ್ಕಾರ ಸುಂಕದ ನಿಯಮಗಳನ್ನು ಬದಲಿಸಬೇಕು ಎಂದು ಬಾರ್ ಮಾಲೀಕರ ಒತ್ತಾಯ ಮಾಡಿದ್ದಾರೆ.

Tags: