ಜೀಜಾಮಾತಾ ವೃತ್ತ ಶಿವಾಜಿ ಕಾಂಪೌಂಡ್‌ನಲ್ಲಿರುವ ದ್ವಜಸ್ಥಂಭಕ್ಕೆ ಅಪರಿಚಿತ ವಾಹನದಿಂದ ಡಿಕ್ಕಿ ಹೊಡೆದು ಜಖಂಗೊಂಡಿದೆ. ವಾರ್ಡ್ ನಂ.9ರ ಕಾರ್ಪೊರೇಟರ್ ಪೂಜಾ ಪಾಟೀಲ್ ರವರು ಹಾಗು ಸಮಾಜ ಸೇವಕ ಇಂದ್ರಜೀತ ಪಾಟೀಲರವರು ದ್ವಜಸ್ಥಂಭ ದುರಸ್ತಿಗೊಳಿಸುವಂತೆ ಮೇಯರ್ ಅವರಿಗೆ ಮನವಿ ಮಾಡಿದರು. ಆ ಹಿನ್ನೆಲೆಯಲ್ಲಿ ಇಂದು ಮೇಯರ್ ಶೋಭಾ ಸೋಮನಾಚೆ ಸರ್ವೆ ನಡೆಸಿ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಸಂಖ್ಯೆ 9 ರ ಕಾರ್ಪೊರೇಟರ್ ಪೂಜಾ ಇಂದ್ರಜೀತ ಪಾಟೀಲ್,ರಮೇಶ ಮೋಡ್ಗೇಕರ್, ರಾಜು ರೆಡೇಕರ್, ಉಮೇಶ ತಾಸೀಲ್ದಾರ್, ಕಿರಣ್ ಮೋಡ್ಗೇಕರ್, ಮಹಾದೇವ ಲಾಡ್, ತುಕಾರಾಂ ಭಾರತಿ, ಸತೀಶ ಸಾವಂತ್, ರವಿ ಪಾಟೀಲ್, ನಂದು . ಹುಂಡಲೇಕರ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Uncategorized
ಜೀಜಾಮಾತಾ ವೃತ್ತದಲ್ಲಿರುವ ದ್ವಜಸ್ಥಂಭ ದುರಸ್ತಿಗೊಳಿಸಲು ಸೂಚಿಸಿದ ಮೇಯರ್
