Uncategorized

ಅಂಬೇಡ್ಕರ್ ಪುತ್ಥಳಿಯ ಎದುರು ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಪಾಲಿಕೆ ಸದಸ್ಯರು

Share

ಇಲ್ಲಿನ ಭಾಗ್ಯನಗರದ ಪಾಲಿಕೆ ಸದಸ್ಯ ಅಭಿಜಿತ್ ಜವಳಕರ ಮೇಲಿನ ಹಲ್ಲೆಯನ್ನು ಖಂಡಿಸಿ ಬಿಜೆಪಿ ಸದಸ್ಯರು ಬುಧವಾರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಎದುರು ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ಮಾತನಾಡಿ, ಜನಪರ ಕೆಲಸ ಮಾಡಲು ಹೋದ ಪಾಲಿಕೆ ಚುನಾಯಿತ ಜನಪ್ರತಿನಿಧಿ ಅಭಿಜಿತ್ ಜವಳಕರ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ. ಅಲ್ಲದೆ, ಪಾಲಿಕೆ ಸದಸ್ಯ ಅಭಿಜಿತ್ ಜವಳಕರ್ ಆಸ್ಪತ್ರೆಯಲ್ಲಿರುವಾಗಲೇ ಪೊಲೀಸರು ಬಂಧಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಾರ್ವಜನಿಕರ ಸಮಸ್ಯೆ ಬಂದಾಗ ಅಧಿಕಾರಗಳ ಸಮ್ಮುಖದಲ್ಲಿಯೇ ಜವಳಕರ್ ಮೊಬೈಲ್ ಟವರ್ ಅಳವಡಿಕೆಯ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪಾಲಿಕೆ ಸದಸ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ನಮಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಬಿಜೆಪಿ ಸದಸ್ಯರಾದ ಹನುಮಂತ ಕೊಂಗಾಲಿ, ರವಿ ಧೋತ್ರೆ, ವೀಣಾ ವಿಜಾಪುರೆ, ಶಂಕರ ಪಾಟೀಲ, ಗಿರೀಶ್ ದೋಂಗಡಿ, ವಾಣಿ ಜೋಶಿ, ಅಭಿಜಿತ್ ಜವಳಕರ್ ಸೇರಿದಂತೆ ಇನ್ನಿತರರು

Tags: