ಬೆಳಗಾವಿ ಬಿಹಾರ ಆಗಿದೆ ಎಂದು ಹೇಳುವ ದಕ್ಷಿಣ ಮತಕ್ಷೇತ್ರದ ಶಾಸಕ ಈ ಹಿಂದೆ ಗುಂಡಿ ಬಿದ್ದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಪೋಸ್ಟ್ ಹಾಕಿದ್ದಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿದ್ದ ಆಗ ರಾಜಸ್ಥಾನ ಆಗಿತ್ತಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಮಂಗಳವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕ ಅಭಯ ಪಾಟೀಲ ಎಷ್ಟು ಮಂದಿನ ಎಲ್ಲೇಲ್ಲಿ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ಏಕಾಏಕಿ ಬಿಹಾರ ಆಗಿ ಬಿಟ್ಟಿತ್ತಾ ಎಂದು ವಾಗ್ದಾಳಿ ನಡೆಸಿದರು.
ಭಾಗ್ಯನಗರದಲ್ಲಿ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಅದನ್ನು ಹೇಳೋರು ಯಾರು ? ಬಿಜೆಪಿಯ ಪಾಲಿಕೆ ಸದಸ್ಯರು ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದರು. ರಮೇಶ ಪಾಟೀಲ ಪರವಾಗಿ ಎಂಇಎಸ್ ನವರು ಪ್ರತಿಭಟನೆ ಮಾಡಿದರು. ಪಾಲಿಕೆ ಸದಸ್ಯ ಹಲ್ಲೆ ಮಾಡಿದ್ದು ಯಾರ ಕುಮ್ಮಕ್ಕಿನ ಮೇಲೆ ಎಂದು ಪ್ರಶ್ನಿಸಿದ ಅವರು, ಅವರು ಪ್ರತಿಭಟನೆ ಮಾಡುವುದರ ಮೂಲಕ ಕಾನೂನಿನ ಮೇಲೆ ಒತ್ತಡ ಹಾಕಿದ್ದಾರೆ. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಅವರು ಹೇಳಿದ ತಕ್ಷಣ ರಾಜಕೀಯವಾಗುವುದಿಲ್ಲ. ಅಂತಿಮವಾಗಿ ನ್ಯಾಯಾಲಯ ತೀರ್ಪು ನೀಡುತ್ತದೆ ಎಂದರು. ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನವೆ ಪಾಲಿಕೆ ಸದಸ್ಯ ಜವಳಕರ ಬಂಧನ ಮಾಡಿದ್ದಾರೆ ಎಂದು ಬಿಜೆಪಿ ಸದಸ್ಯರ ಆರೋಪಕ್ಕೆ ಉತ್ತರಿಸಿದ ಅವರು, ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆಯೇ ಅವರನ್ನು ಬಂಧಿಸಿದ್ದಾರೆ. ಅದು ಪೊಲೀಸರ ಕಡೆ ದಾಖಲೆ ಇದೆ. ತೆಲಂಗಾಣದಿಂದ ಶಾಸಕ ಬಂದು ಇನ್ನೊಂದು ಮತ್ತೆ ಪತ್ರ ಕೊಡಿಸಿದ್ದಾನೆ. ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಬಂಧಿಸಿದ್ದೇವೆ ಎನ್ನುತ್ತಿದ್ದಾರೆ. ಅಂತಿಮವಾಗಿ ನ್ಯಾಯಾಲಯ ನೋಡಬೇಕು ಅಷ್ಟೆ ಎಂದರು
ಇಬ್ಬರ ವೈಯಕ್ತಿಕ ಜಗಳ ಗಲಾಟೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ವಿನಾಕಾರಣ ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ. ಮೊಬೈಲ್ ಟವರ್ ವಿಷಯವಾಗಿ ಜಗಳ ಮಾಡಲು ಅವರಿಗೆ ನಾವು ಹೇಳಿದ್ದೇವಾ ? ಅದು ನಮ್ಮ ಜಗಳವಾ ? ಅವರು ವೈಯಕ್ತಿವಾಗಿ ಜಗಳವಾಡಿದ್ದಾರೆ. ಇದಕ್ಕೂ ಪಾಲಿಕೆ ಸೂಪರ್ ಸೀಡ್ ಗೂ, ಕಾಂಗ್ರೆಸ್ಗೂ ಏನು ಸಂಬಂಧ ಇದೆ. ಅದನ್ನು ಬಿಟ್ಟು ಕಾಂಗ್ರೆಸ್ ಮೇಲೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ತಿನಿಸು ಕಟ್ಟೆಯಲ್ಲಿ ಪಾಲಿಕೆ ಬಿಜೆಪಿ ಸದಸ್ಯರ ಪತ್ನಿಯ ಹೆಸರಿನ ಮೇಲೆ ಇರುವುದು ತನಿಖೆಯಾಗುತ್ತಿದೆ. ಇಲ್ಲಿ ಮಳಿಗೆ ಇದ್ದವರು. ಒಂದು ಕೋಟಿ ರೂ. ಕಾರ್ ಇದ್ದವರು, ಚಿನ್ನಾಭರಣ ಅಂಗಡಿ ಇದ್ದವರಿಗೆ ಹಂಚಿಕೆಯಾಗಿದೆ. ತಿನಿಸು ಕಟ್ಟೆಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿತ್ತು. ಮಳಿಗೆ ಹಂಚಿಕೆ ಮಾಡುವಾಗ ಕನಿಷ್ಠ ಎರಡು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕಿತ್ತು. ಆದರೆ ಗಾಳಿಗೋಪುರ ಪತ್ರಿಕೆ ಜಾಹೀರಾತು ನೀಡಿ ಗಾಳಿಯಲ್ಲಿ ಗೋಪುರ ಕಟ್ಟಿ ಬಿಟ್ಟಿದ್ದಾರೆ. ಇಲ್ಲಿ ಕೇವಲ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರಿಗೆ ಹಂಚಿಕೆ ಮಾಡಿರುವುದು ದಾಖಲೆ ಇದೆ. ತನಿಖೆ ಪೂರ್ಣಗೊಂಡಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಸರಕಾರಿ ಆಸ್ತಿ ಇರಬಾರದು ಎಂದು ಕಾನೂನಿನಲ್ಲಿ ಇದೆ. ಆದರೆ ಪಾಲಿಕೆ ಸದಸ್ಯರ ಪತ್ನಿಯ ಹೆಸರಿನಲ್ಲಿ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದಿದ್ದಾರೆ. ಅದನ್ನು ಮರಳಿ ಕೊಡಬೇಕಿತ್ತು. ತನಿಖೆ ವರದಿ ಬರಬೇಕಿದೆ ನೋಡೋಣ ಎಂದರು.
ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆ ಮಾಡುವುದನ್ನು ಮುಖ್ಯಮಂತ್ರಿ, ಹಾಗೂ ಉಪಮುಖ್ಯಮಂತ್ರಿ ನಿರ್ಣಯ ಮಾಡುತ್ತಾರೆ. ಯಾರಾಗುತ್ತಾರೆ ಎನ್ನುವುದನ್ನು ಮಾಧ್ಯಮದ ಮೂಲಕ ನೋಡಬೇಕು ಅಷ್ಟೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆಶಿವಕುಮಾರ ಅವರ ವಿವಚನಗೆ ಬಿಟ್ಟಿದ್ದು ಎಂದು ಸುದ್ದಿಗಾರರೊಂದಿಗೆ ಪ್ರಶ್ನೆಗೆ ಉತ್ತರಿಸಿದರು.
ಮಾಗಡಿ ಶಾಸಕರ ವಿವಾದಾತ್ಮಕ ಹೇಳಿಕೆಗೆ ಕುರಿತು ಮಾತನಾಡಿದ ಅವರು ಆ ವಿಷಯ ಚರ್ಚೆ ಪರ ವಿರೋಧ ಆಗಿ ಹೋಗಿದೆ ಮುಗಿದ ವಿಷಯ ಚರ್ಚಿಸಿದು ಸೂಕ್ತವಲ್ಲ ನಾವು ಅದರ ಕುರಿತು ಮಾತನಾಡಲ್ಲ ಸಂದರ್ಭ ಬಂದಾಗ ನೋಡೋಣಾ ಎಂದರು . ಬೈಟ್
ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಾಜಾ ಸಲೀಂ, ಸುನೀಲ್ ಹನುಮಣ್ಣವರ ಉಪಸ್ಥಿತರಿದ್ದರು