Uncategorized

ಸುವರ್ಣಸೌಧದ ಸಭಾ ಭವನದಲ್ಲಿಯ ಗಣ್ಯರ ಭಾವ ಚಿತ್ರ ಸರಿಪಡಿಸುವಂತೆ ಶಾಸಕ ಬಸವರಾಜ ರಾಯರೆಡ್ಡಿ ಆಗ್ರಹ

Share

ಸುವರ್ಣಸೌಧದ ಸಭಾ ಭವನದಲ್ಲಿಯ ಗಣ್ಯರ ಭಾವ ಚಿತ್ರ ಸರಿಪಡಿಸುವಂತೆ ಶಾಸಕ ಬಸವರಾಜ ರಾಯರೆಡ್ಡಿ ಆಗ್ರಹಿಸಿದರು

ಬೆಳಗಾವಿ ಸುವರ್ಣ ವಿಧಾನ ಸೌಧದ ಸಭಾ ಭವನದ ಒಳಗಡೆ ಗಣ್ಯರ ಭಾವ ಚಿತ್ರಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಮಾದ್ಯಮಗಳ ಜೋತೆ ಮಾತನಾಡುತ್ತಾ ಬೆಳಗಾವಿ ಸುವರ್ಣ ವಿಧಾನ ಸೌಧದ ಸಭಾ ಭವನದಲ್ಲಿ ಸದ್ಯಕ್ಕೆ ರಾಷ್ಟ್ರದ ಗಣ್ಯರ ಭಾವ ಚಿತ್ರಗಳನ್ನು ಅಳವಡಿಸಿರುತ್ತಾರೆ ,ಅದಕ್ಕೆ ನಮ್ಮ ಅಕ್ಷಪಣೆ ಇಲ್ಲಾ ಈ ಭಾವ ಚಿತ್ರಗಳನ್ನು ಪರಿಶೀಲಿಸಿ ಸೂಕ್ತ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನ ಸಭೆ ಹಾಲಿನಲ್ಲಿ ಹಾಕಲಾಗಿರುವ ಬಸವೇಶ್ವರ ಭಾವಚಿತ್ರ, ಮಹಾತ್ಮಾ ಗಾಂಧಿಜಿ, ಸುಭಾಷಚಂದ್ರ ಭೋಸ್, ಡಾ, ಬಾಬಾಸಾಹೇಬ ಅಂಬೇಂಡ್ಕರ, ಡಾ, ಬಾಬು ರಾಜೇಂದ್ರ ಪ್ರಸಾದ, ಪಂಡಿತ್ ಜವಾಹರಲಾಲ ನೇಹರು, ಶ್ರೀಮತಿ ಇಂದಿರಾ ಗಾಂಧಿ, ಇವರ ಗಾಂಭೀರ್ಯ ಮತ್ತು ವೇಷ ಗಳನ್ನು ಬಿಂಬಿಸುವ ಭಾವ ಚಿತ್ರಗಳನ್ನು ಬದಲಾಯಿಸಬೇಕು ಮತ್ತು ನೂತನವಾಗಿ ಅಟಲ ಬಿಹಾರಿ ವಾಜಪೇಯಿ, ಎಸ್ ನಿಜಲಿಂಗಪ್ಪಾ, ಕೆಂಗಲ್ ಹನುಮಂತಯ್ಯ ಇವರ ಭಾವ ಚಿತ್ರಗಳನ್ನು ಸಭಾ ಭವನದಲ್ಲಿ ಹಾಕಬೇಕು ಎಂದು ಮಾದ್ಯಮಗಳ ಮೂಲಕ ಒತ್ತಾಯಿಸಿದರು

Tags: