ಖಾನಾಪೂರ ತಾಲೂಕಿನ ಗರ್ಭನಟ್ಟಿ ಗ್ರಾಮಸ್ಥರು ನೀರಿಲ್ಲದೇ ಪರದಾಡುವ ಸ್ಥಿತಿ ಉದ್ಭವಿಸಿದೆ ಆದ್ದರಿಂದ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಶಾಸಕ ವಿಠ್ಠಲ ಹಲಗೇಕರ ಅವರನ್ನು ಬೇಡಿಕೊಂಡರು.ಇದಕ್ಕೆ ಕೂಡಲೇ ಸ್ಪಂದಿಸಿರುವ ಶಾಸಕ ವಿಠ್ಠಲ ಹಲಗೇಕರ ಅವರು ಬೋರ್ ವೆಲ್ ವಾಹನದ ವ್ಯವಸ್ಥೆ ಮಾಡಿ ಬೋರವೆಲ್ ಗಾಡಿಗೆ ಪೂಜೆ ಸಲ್ಲಿಸಿ ತಾವೇ ನಿಂತು ನೀರು ಬರುವವರೆಗೆ ಕಾದು ಶಾಶ್ವತವಾಗಿ ಗರ್ಭನಟ್ಟಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟರು ಇದರಿಂದ ಗರ್ಭನಟ್ಟಿ ಗ್ರಾಮಸ್ಥರು ಶಾಸಕ ವಿಠ್ಠಲ ಹಲಗೇಕರ ಅವರಿಗೆ ಮನಃಪೂರ್ವಕ ಹಾರೈಸಿದರು.ಈ ಸಂದರ್ಭದಲ್ಲಿ ಸಂಪೂರ್ಣ ಗ್ರಾಮವೇ ಸಂತಸಮಯ ವಾತಾವರಣದಲ್ಲಿ ಕಂಡು ಬಂತು.
ಅಲ್ತಾಫ್ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ