Uncategorized

ಶಾಲಾ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವನ್ನು ಒದಗಿಸಿಕೊಟ್ಟ ಶಾಸಕ ವಿಠ್ಠಲ ಹಲಗೇಕರ

Share

 ಖಾನಾಪೂರ ತಾಲೂಕಿನ ಬಿದರಬಾವಿ, ಸಣ್ಣಹೋಸೋರ ನಿಲಗಡ್ ತೋಪಿನಕಟ್ಟಿ ಸೇರಿದಂತೆ ಬಿದರಬಾವಿಗಳ ಶಾಲಾ ವಿದ್ಯಾರ್ಥಿಗಳು ಬಸ್ ಸೌಲಭ್ಯ ಇಲ್ಲದೇ ಪರದಾಡುವ ಸ್ಥಿತಿಯನ್ನು ಅರಿತು ಅವರಿಗೆ ಬಸ್ ಸೌಲಭ್ಯವನ್ನು ಒದಗಿಸಿಕೊಟ್ಟ ಬಸ್ ಪೂಜೆ ಮಾಡಿ ಖಾನಾಪೂರ ಪಟ್ಟಣದ ಕಡೆಗೆ ಬಂದು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.ಈ ಬಸ್ ಸೌಲಭದಿಂದ ಈ ಭಾಗಗಳ ಜನಸಾಮಾನ್ಯರಿಗೂ ಕೂಡಾ ಬಹಳ ಸದುಪಯೋಗವಾಗಲಿದ್ದು,ಶಾಸಕ ವಿಠ್ಠಲ ಹಲಗೇಕರ ಅವರು ಕೂಡಲೇ ಆಸಕ್ತಿ ವಹಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೋಗಲು ಅನುವು ಮಾಡಿದರಿಂದ ಅವರಿಗೆ ವಿದ್ಯಾರ್ಥಿಗಳ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಲೈಲಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: