ಆ ಕುಟುಂಬದ ಪೂರ್ಣ ಜವಾಬ್ದಾರಿ ಈ ಯುವಕನ ಮೇಲೆಯೇ ಇದೆ. ವಯಸ್ಸಾದ ತಂದೆ, ತಾಯಿ ಹಾಗೂ ಮಡದಿ ಜೊತೆ ಸುಖವಾಗಿದ್ದ. ಆದ್ರೆ ಆ ಯುವಕನಿಗೆ ಮೊದಲಿನಿಂದಲೂ ಒಂದೇ ಕಿಡ್ನಿ. ಬರುಬರುತ್ತಾ ಇನ್ನೊಂದು ಕಿಡ್ನಿ ಕೈಕೊಟ್ಟಿದೆ. ಮಗನಿಗೆ ತಾಯಿಯೇ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಆದ್ರೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದಾರೆ. ಸಹಾಯಕ್ಕಾಗಿ ಅಂಗಲಾಚಿತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಈ ದೃಶ್ಯದಲ್ಲಿ ಕಾಣುವ ಯುವಕನ ಹೆಸರು ಶ್ರೀಶೈಲ ಮಾನಶೆಟ್ಟಿ, 34 ವಯಸ್ಸಿನ ಶ್ರೀಶೈಲ,
ವಿಜಯಪುರ ನಗರದ ದರ್ಗಾ ಏರಿಯಾದ ನಿವಾಸಿಯಾಗಿದ್ದಾನೆ. ಹುಟ್ಟಿನಿಂದಲೇ ಒಂದು ಕಿಡ್ನಿ ಮೇಲೆ ಬದುಕಿದವ.ವಿಧಿಯಾಟವೆಂಬಂತೆ ಬರುಬರುತ್ತ ಆ ಕಿಡ್ನಿಯು ಹಾಳಾಗತೊಡಗಿತು. ಪರಶಿ ಅಂದ್ರೆ ಟೈಲ್ಸ್ ಹಾಕುವ ಕೆಲಸ ಮಾಡುವ ಶ್ರೀಶೈಲಗೆ ತಂದೆ,ತಾಯಿಯ ಜೊತೆ ಮಡದಿ ಇದ್ದು ಸಂಸಾರದ ಜವಾಬ್ದಾರಿ ಶ್ರೀಶೈಲ ಮೇಲಿದೆ. ಕಳೆದ ಒಂದು ವರೆ ವರ್ಷದ ಹಿಂದೆ ಈತನಿಗೆ ಕಿಡ್ನಿ ಸಮಸ್ಯೆ ಇರೋದು ಗೊತ್ತಾಗಿ ದೊಡ್ಡ ದೊಡ್ಡ ಆಸ್ಪತ್ರೆ ತೊರಿಸಿದ್ದಾರೆ. ಆಗ ಜೆ.ಎಸ್.ಎಸ್.ಆಸ್ಪತ್ರೆಯಲ್ಲಿ ಡಯಾಲಸಿಸ್ ಮಾಡಲಾಗುತ್ತಿತ್ತು. ಇದೀಗ ಸಂಪೂರ್ಣ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಇಡೀ ಕುಟುಂಬ ಇದೀಗ ತೋಚದೆ ಕಂಗಾಲಾಗಿದೆ.
ಇನ್ನೂ ಮಗನ ಕಷ್ಟ ನೋಡದೇ ತಾಯಿ ಶಾಂತಾ ಇವರು ಕಿಡ್ನಿ ಕೊಡಲು ಮುಂದಾಗಿದ್ದಾರೆ.ಆದ್ರೆ ಅದಕ್ಕೆ ತಗಲುವ ವೆಚ್ಚ ಭರಿಸಲಾಗಲು ಕೂಡಾ ಹಣವಿಲ್ಲದೇ ಇದ್ದಾಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇವರು ತಮ್ಮ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ. ಆದ್ರೆ ಆಪರೇಷನ್ ಬಳಿಕ ಈ ಮೆಡಿಸಿನ್ ಖರ್ಚು ಮತ್ತಿತರ ಖರ್ಚಿನ ಕುರಿತು ಈ ಕುಟುಂಬ ಚಿಂತಾಕ್ರಾಂತವಾಗಿದೆ.
ಒಟ್ಟಾರೆ, ಮಗನ ಜೀವ ಕಾಪಾಡಲು ತಾಯಿ ಮುಂದಾಗಿ ತಾಯಿ ಹೃದಯ ಯಾವತ್ತಿದ್ದರೂ ದೊಡ್ಡದು ಎಂಬುದನ್ನು ಸಾಬೀತು ಮಾಡಿದ್ದಾರೆ. ಆದ್ರೆ ಇವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಸಹೃದಯಿಗಳು, ಸಂಘ ಸಂಸ್ಥೆಗಳು ಸಹಾಯಕ್ಕೆ ಮುಂದಾಗಬೇಕಿದೆ. ನೆರವು ನೀಡಬಯಸುವ ಸಹೃದಯಿಗಳು ಈ ಖಾತೆಗೆ ಹಣ ಹಾಕಬಹುದಾಗಿದೆ.
Bank- State Bank of India
Name:- ಶ್ರೀಶೈಲ ಐ.ಮಾದನಶೆಟ್ಟಿ,
A/c- 33239057101
IFC- SBIN0016130
ಹೆಚ್ಚಿನ ಮಾಹಿತಿಗಾಗಿ
97408 39694 / 9606870683
ಸಂಪರ್ಕಿಸಬಹುದು.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.