Uncategorized

Bigg Boss Kannada 10 : ದೊಡ್ಮನೆಗೆ ಮೊದಲ ಎಂಟ್ರಿ ಕೊಟ್ಟ ನಮ್ರತಾ ಗೌಡ

Share

ಕಿರುತೆರೆಯ ಖ್ಯಾತ ನಟಿ ನಮ್ರತಾ ಗೌಡ (Namrata Gowda), ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ನಾಗಿಣಿ 2 ಧಾರಾವಾಹಿ ಮೂಲಕ ಫೇಮಸ್ ಆದ ನಟಿ ಇವರು. ತಂದೆ, ತಾಯಿ ಮತ್ತು ಕುಟುಂಬ ಈ ಸಂದರ್ಭದಲ್ಲಿ ಹಾಜರಿತ್ತು. ತಾವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಬಂದೆ ಎನ್ನುವ ಕುರಿತು ನಮ್ರತಾ ಗೌಡ ಮಾತನಾಡಿದರು. ನಿರ್ಣಾಯಕರಾದ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಒಟ್ಟಾರೆ ಶೇಕಡಾ 86ರಷ್ಟು ವೋಟ್ ಪಡೆದುಕೊಂಡು ಆಯ್ಕೆಯಾದರು.

ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಒಳಗೆ ಹೋದ ನಮ್ರತಾ ಗೌಡ ಅವರಿಗೆ ಸ್ಪೆಷಲ್ ಕೆಲಸವನ್ನು ನೀಡಿದರು ಸುದೀಪ್. ಮೊದಲ ಕಂಟೆಸ್ಟೆಂಟ್ ಆಗಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಹಾಲು ಉಕ್ಕಿಸುವಂತೆ ಹೇಳಿದರು. ನಮತ್ರಾ ಮನೆಯೊಳಗೆ ಕಾಲಿಟ್ಟು ಹಾಲು ಉಕ್ಕಿಸುವ ಮೂಲಕ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ. ‘ಊರಿಗೊಬ್ಬಳೆ ಪದ್ಮಾವತಿ’ ಹಾಡಿನ ಮೂಲಕ ವೇದಿಕೆಗೆ ಬಂದ ನಮ್ರತಾ, ಹಲವಾರು ವಿಚಾರಗಳನ್ನು ಹಂಚಿಕೊಂಡರು.
ಶಾಕ್ ನೀಡಿದ ಸುದೀಪ್
ಇಂದಿನಿಂದ ಬಿಗ್ ಬಾಸ್ ಸೀಸನ್ 10 (Bigg Boss Kannada 10 )ಶುರುವಾಗಿದೆ. ಬಿಗ್ ಬಾಸ್ ಮನೆಯನ್ನು ಪರಿಚಯಿಸುವ ಮೂಲಕ ಸುದೀಪ್ (Sudeep) ಈ ಸೀಸನ್ ಅನ್ನು ಶುರು ಮಾಡಿದರು. ಈ ಮನೆಯಲ್ಲಿ ಚಂದನ್ ಶೆಟ್ಟಿ ಅವರು ನೃತ್ಯ ಮಾಡಿ, ಈ ಬಾರಿ ಸ್ಪರ್ಧೆಗಳು ಯಾರೆಲ್ಲ ಇರಲಿದ್ದಾರೆ ಎಂದು ಪ್ರಶ್ನೆ ಮಾಡಿದರು. ಆದರೆ, ಸುದೀಪ್ ಅಸಲಿ ಆಟ ಬೇರೆನೇ ಇದೆ ಎಂದು ಹೇಳುವ ಮೂಲಕ ಕಲರ್ ಫುಲ್ ವೇದಿಕೆಗೆ ಬಂದರು. ಆದರೆ, ಈ ಬಾರಿ ಸ್ಪರ್ಧಿಗಳಿಗೆ ಮೊದಲ ಬಾರಿಗೆ ಶಾಕ್ ನೀಡಿದರು.

ಪ್ರತಿ ಬಾರಿಯೂ ವಾಹಿನಿಯು ಆಯ್ಕೆ ಮಾಡಿದ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಕರೆಯಿಸಿಕೊಂಡು ಅವರೊಂದಿಗೆ ಮಾತುಕತೆಯಾಡಿ, ಆನಂತರ ದೊಡ್ಮನೆ ಒಳಗೆ ಕಳುಹಿಸಿ ಕೊಡುವುದು ವಾಡಿಕೆಯಾಗಿತ್ತು. ಆದರೆ, ಈ ಬಾರಿ ವಿಭಿನ್ನ ರೀತಿಯಲ್ಲಿ ಸ್ಪರ್ಧಿಗಳನ್ನು ಕಳುಹಿಸಿಕೊಡುವ ಕುರಿತು ಮಾತನಾಡಿದರು ಸುದೀಪ್. ಈ ಮೂಲಕ ಸ್ಪರ್ಧಿಗಳಿಗೆ ಶಾಕ್ ನೀಡಿದರು ಕಿಚ್ಚ ಸುದೀಪ್.

ಹಿಂದಿನ ಸೀಸನ್ ಗಳಲ್ಲಿ ವಿನ್ ಆದಂತಹ ನಟಿ ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ ಮತ್ತು ಮಂಜು ಪಾವಡ ಈ ನಾಲ್ವರನ್ನು ವೇದಿಕೆಯ ಮೇಲೆ ಕರೆದು, ವೇದಿಕೆಗೆ ಬರುವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಬೇಕೋ ಅಥವಾ ಬೇಡವೋ ಎಂದು ವೋಟು ಮಾಡಲು ತಿಳಿಸಿದರು. ಈ ನಾಲ್ವರು ವೋಟ್ ಮಾಡಿದ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಸುದೀಪ್ ಪ್ರಕಟಿಸಿ ಶಾಕ್ ನೀಡಿದ್ದಾರೆ.

Tags:

Namrata Gowda gave the first entry to Dodmane