Uncategorized

ಕಾಂಗ್ರೆಸ್ ನಲ್ಲಿ ಅಸಮಾಧಾನ ಇಲ್ಲಾ ;ಸಚಿವ ಎಂ ಬಿ ಪಾಟೀಲ

Share

ನಿನ್ನೆಯೇ ಸತೀಶ್ ಜಾರಕಿಹೋಳಿ ನಾವು ಕೂಡಿದ್ದೇವು, ಮೈಸೂರು ದಸರಾಗೆ ಹೋಗುತ್ತಿದ್ದೇವೆ ಎಂದು ನನ್ನನ್ನೂ ಕರೆದರು ಎಂದು ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯವನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅಲ್ಲಗಳೆದಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ ಹಾಗೂ 20 ಕ್ಕೂ ಹೆಚ್ಚು ಶಾಸಕರ ಜೊತೆಗೆ ಸಚಿವ ಸತೀಶ ಜಾರಕಿಹೋಳಿ ಮೀಟಿಂಗ್ ಮಾಡಲು ಮೈಸೂರಿಗೆ ತೆರಳಿ ಬಂಡಾಯ ಏಳಲು ಪ್ಲ್ಯಾನ್ ಮಾಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ನಿನ್ನೆಯೇ ಸತೀಶ್ ಜಾರಕಿಹೋಳಿ ನಾವು ಕೂಡಿದ್ದೇವು, ಮೈಸೂರು ದಸರಾಗೆ ಹೋಗುತ್ತಿದ್ದೇವೆ ಎಂದಿದ್ದರು, ಸುನೀಲ್ ಹನುಮುಕ್ಕನವರ ಹಾಗೂ ಇತರರ ಬಂದಿದ್ದರು ಎಲ್ಲರೂ ಸೇರಿ ಮೈಸೂರು ದಸರಾಗೆ ಹೋಗೋಣವೆಂದರು, ಮೈಸೂರು ದಸರಾಗೆ ಹೋದರೆ ಬಂಡಾಯವಾ ಎಂದು ಪ್ರಶ್ನೆ ಮಾಡಿದರು. ಮೊನ್ನೆ ಸಬ್ ಕಮೀಟಿ ಮೀಟಿಂಗ್ ನಲ್ಲಿ ಸತೀಶ್ ಹಾಗೂ ನಾವು ಚರ್ಚೆ ಮಾಡಿದ್ದೇವೆ. ದಸರಾಗೆ ಹೋದರೆ ಅಸಮಾಧಾನವಾ? ಕಾಂಗ್ರೆಸ್ ನಲ್ಲಿ ಅಸಮಾಧಾನ ಇಲ್ಲಾ ಏನಿದ್ದರೂ ಬಿಜೆಪಿ ಜನತಾ ದಳ ಫುಲ್ ಅಸಮಾಧಾನ ಎಂಬರ್ಥದಲ್ಲಿ ಮಾತನಾಡಿದರು. ಸತೀಶ ಜಾರಕಿಹೋಳಿ ನನ್ನ ಆತ್ಮೀಯ ಸ್ನೇಹಿತರು, ಮೊನ್ನೆಯೂ ಕೂಡಾ ದಸರಾಗೆ ಹೋಗುತ್ತೇನೆ ಬನ್ನಿ ಎಂದು ಹೇಳಿದ್ದರು.‌ಆದ್ರೆ ನಾನು ವಿದೇಶಿ ಪ್ರವಾಸದಲ್ಲಿದ್ದೇ 10 – 15 ದಿನ ಜಿಲ್ಲೆಯಲ್ಲಿರಲಿಲ್ಲಾ, ನಮ್ಮ ಜಿಲ್ಲೆಯಲ್ಲಿ ಬರದ ಕುರಿತು ಮೀಟಿಂಗ್ ಮಾಡಬೇಕಿದೆ. ನೀವು ಹೋಗಿ ಬರ್ರಿ, ನಮಗೆ ದಸರಾದಲ್ಲಿ ಭಾಗಿಯಾಗೋ ಭಾಗ್ಯ ಇಲ್ಲಾ ಎಂದಿದ್ದೆ ಎಂದು ಹೇಳಿದ್ದರು ಎಂದು ತಿಳಿಸಿದರು.

Tags: