Uncategorized

18 ರಂದು ಖಾನಾಪೂರದ ಜನತಾ ದರ್ಶನ ದಂಡಾಧಿಕಾರಿ ಪ್ರಕಾಶ ಗಾಯಕವಾಡ ಮಾಹಿತಿ

Share

ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿ ಬುಧವಾರ ದಿ 18 ರಂದು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಂಡು ಈ ಜನತಾ ದರ್ಶನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅವರು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ನಮ್ಮ ಖಾನಾಪೂರದಲ್ಲಿ ಪ್ರಥಮ ಬಾರಿಗೆ ನೆಚ್ಚಿನ ಜಿಲ್ಲಾಧಿಕಾರಿ ಆಯೋಜಿಸಿದ್ದು ಜಿಲ್ಲಾ ಆಡಳಿತ ಸೇರಿದಂತೆ ಎಲ್ಲ ಇಲಾಖೆಗಳು ಖಾನಾಪೂರ ತಾಲೂಕಿನ ರಾಯಣ್ಣನ ನಂದಗಡಕ್ಕೆ ಬರಲಿದ್ದು ರಾಯಾಪೂರದಲ್ಲಿರುವ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಆವರಣದಲ್ಲಿ ಬೆಳ್ಳಿಗೆ ಹತ್ತರಿಂದ ಸಾಯಂಕಾಲದ ಐದು ಗಂಟೆಯವರೆಗೆ ಜನರ ಸಮಸ್ಯೆಗಳನ್ನು ಆಲಿಸಲಿದ್ದು, ಆದ್ದರಿಂದ ತಮ್ಮ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಜನತಾ ದರ್ಶನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅವರು ಮಾಹಿತಿ ನೀಡಿದರು.

ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

On 18 Janata Darshan Bhandadi Prakash Gaikwad of Khanapur informed