ನವರಾತ್ರಿ ಮಹಾನವಮಿ ಹಬ್ಬದ ನಿಮಿತ್ಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆದಿ ಜಾಂಬವ ಸಮಾಜದ ವತಿಯಿಂದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನವದುರ್ಗೆ ದುರ್ಗಾಮಾತೆಯ ಉತ್ಸವ ಮೂರ್ತಿಯನ್ನು 9 ದಿನಗಳವರೆಗೆ ಪ್ರತಿಷ್ಟಾಪನೇ ಮಾಡಲಾಯಿತು.
ಅಪರಾಹ್ನ ವೇಳೆಗೆ ನೂರಾರು ಸುಮಂಗಲಿಯರು ದುರ್ಗಾದೇವಿಯ ದೇವಸ್ಥಾನದಿಂದ ಆರತಿಯೊಂದಿಗೆ ಕೊಣ್ಣೂರ ಸೀಮೆಗೆ ತೆರಳಿ ಮೂರ್ತಿಗೆ ಅಬಿಷೇಕ, ಪೂಜೆ ನೆರವೇರಿಸಿ ವಿವಿಧ ವಾದ್ಯ ಮೇಳದೊಂದಿಗೆ ಹೊರಟ ಭವ್ಯ ಮೆರವಣಿಗೆಯಲ್ಲಿ ಹಲಗಿ ಬಾರಿಸುತ್ತ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಕುಣಿಯುತ್ತ , ಒಬ್ಬರಿಗೊಬ್ಬರು ಬಂಢಾರ ಎರಚಿ ಶ್ರೀ ದುರ್ಗಾ ಮಾತಾ ಕಿ ಜೈ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಾದ ಬಜಾರ ರಸ್ತೆ, ವಾಲ್ಮೀಕಿ ವೃತ್ತ, ಕಾಮನ ಚೌಕ ಮುಖಾಂತರ ತೆರಳಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ 9 ದಿನಗಳ ವರೆಗೆ ಪ್ರತಿಷ್ಟಾಪನೆ ಮಾಡಿದರು
ಸುಮಂಗಲಿಯರು ,ಸ್ಥಳಿಯರು ದೇವಿ ಮೂರ್ತಿಗೆ ನೈವೇದ್ಯ
ನೀಡಿ ದರ್ಶನ ಪಡೆದನಂತರ ಸಾರ್ವಜನಿಕರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಸಮಾಜದ ಮುಖಂಡರು,ಯುವಕರು,ನೂರಾಯ ಮಹಿಳೆಯರು ಈ ಮೆರವಣಿಗೆಯಲ್ಲಿ ಬಾಗವಹಿಸಿದ್ದರು.
ಈ ಸಂದರ್ಭದಲ್ಲಿ ವೆಂಕಟೇಶ್ ಕೆಲಗೇರಿ, ದನ್ಯಕುಮಾರ್ ಮೇಗೆರಿ, ವಿಠ್ಠಲ್ ಗುಡಾಜ,ಮನೋಹರ ಲಗಮಪಗೊಳ,ಸದಾನಂದ್ ಶಿಂಗ್ಯಾಗೊಳ.ಸುರೇಶ್ ನಡಗೆರಿ. ಮಯೂರ ಗುಡಾಜ.ಕೆಂಪಣ್ಣ ನಡಗೆರಿ ಸೇರಿದಂತೆ ಇನ್ನಿತರರು ಉಪಸಥಿತರಿದ್ದರು.