Uncategorized

ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

Share

ನವದೆಹಲಿ: ಕೇಂದ್ರ ಸರ್ಕಾರಕ್ಕೆ (Union Government) ಫೋನ್‌ ಕದ್ದಾಲಿಕೆ ಮಾಡುವ ಅವಶ್ಯಕತೆಯಿಲ್ಲ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ವ್ಯಂಗ್ಯವಾಡಿದ್ದಾರೆ

ಈ ಕುರಿತು ಮಾತನಾಡಿರುವ ಅವರು, ಕೆಲ ಪ್ರತಿಪಕ್ಷ ನಾಯಕರಿಗೆ ಆಪಲ್‌ನಿಂದ (Apple) ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ ಎಂಬ ಆರೋಪವನ್ನ ತಳ್ಳಿಹಾಕಿದ್ದಾರೆ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು, ಅವರು ಅಧಿಕೃತವಾಗಿ ದೂರು ನೀಡಿದ್ರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾ

ನವದೆಹಲಿ: ಕೇಂದ್ರ ಸರ್ಕಾರಕ್ಕೆ (Union Government) ಫೋನ್‌ ಕದ್ದಾಲಿಕೆ ಮಾಡುವ ಅವಶ್ಯಕತೆಯಿಲ್ಲ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ವ್ಯಂಗ್ಯವಾಡಿದ್ದಾರೆ.

ಹ್ಯಾಕರ್ಸ್‌ ಸಕ್ರೀಯವಾಗಿದ್ದಾರೆ: ಪ್ರತಿಪಕ್ಷಗಳು ದುರ್ಬಲ ಸ್ಥಿತಿಯನ್ನು ಎದುರಿಸುತ್ತಿವೆ, ಎಲ್ಲದರಲ್ಲೂ ಪಿತೂರಿಯನ್ನ ಹುಡುಕುತ್ತಿದ್ದಾರೆ. ಆಪಲ್‌ ಕಂಪನಿ ಸ್ವತಃ ಸ್ಪಷ್ಟಪಡಿಸಿದೆ. ಸುಮಾರು 150 ದೇಶಗಳ ವ್ಯಕ್ತಿಗಳಿಗೆ ನೋಟಿಫಿಕೇಶನ್‌ ಹೋಗಿದೆ. ಉಗಾಂಡದ ರಾಜಕೀಯ ನಾಯಕರ ಐಫೋನಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಬಂದಿದೆ. ಈ ದಾಳಿಯನ್ನ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಶ್ವದಾದ್ಯಂತ ಹ್ಯಾಕರ್‌ಗಳು ಸಕ್ರಿಯರಾಗಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಪಕ್ಷಗಳ ನಾಯಕರು ತಮ್ಮ ಆಂತರಿಕ ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ ಎಂಬುದು ದೇಶದ ಜನರಿಗೆ ತಿಳಿದಿದೆ. ಮೊದಲು ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಫೋನ್‌ಗಳನ್ನು ಕದ್ದಾಲಿಕೆ ಮಾಡುವ ಅವಶ್ಯಕತೆಯೂ ಸರ್ಕಾರಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Tags: