Uncategorized

ಪಂಢರಪುರಕ್ಕೆ ಚಲಿಸುವ ರೇಲ್ವೆಯನ್ನು ಪುನಃ ಪ್ರಾರಂಭಿಸುವಂತೆ ಒತ್ತಾಯಿಸಿದ ಪಾಂಡುರಂಗ ಭಕ್ತರು

Share

ಬೆಳಗಾವಿ ಮಾರ್ಗವಾಗಿ ಪಂಢರಪುರಕ್ಕೆ ಚಲಿಸುವ ನೇರ ರೇಲ್ವೆಯನ್ನು ಪುನಃ ಪ್ರಾರಂಭಿಸುವನಂತೆ ಪಾಂಡುರಂಗ ಭಕ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಈ ಹಿಂದೆ ಬೆಳಗಾವಿ-ಪಂಢರಪುರ ಮಾರ್ಗದಲ್ಲಿ ಪ್ರತಿದಿನ ಮಧ್ಯಾಹ್ನ 2.30 ಮತ್ತು 3.45ಕ್ಕೆ ನೇರ ರೈಲು ಸಂಚಾರ ಆರಂಭಿಸಲಾಗಿತ್ತು. ಆದ್ದರಿಂದ ಬೆಳಗಾವಿ ಜಿಲ್ಲೆ ಹುಬ್ಬಳ್ಳಿ-ಧಾರವಾಡ, ಚಂದಗಢ, ಚಿಕ್ಕೋಡಿ ಮೊದಲಾದ ಕಡೆಯಿಂದ ಆಗಮಿಸುವ ಭಕ್ತರಿಗೆ ಸುಲಭವಾಗಿ ಪಾಂಡುರಂಗನ ದರ್ಶನ ಸಿಗುತ್ತಿತ್ತು . ಆದರೆ ಕಳೆದ 3-4 ವರ್ಷಗಳಿಂದ ರೈಲ್ವೇ ರಿಪೇರಿ ಹೆಸರಿನಲ್ಲಿ ಈ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬೆಳಗಾವಿ-ಪಂಢರಪುರ ಮಾರ್ಗದಲ್ಲಿ ಕೂಡಲೇ ರೈಲು ಮಾರ್ಗ ಆರಂಭಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಪಾಂಡುರಂಗ ಭಕ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯಳ್ಳೂರು-ಧಾಮಣೆ ವೈಷ್ಣವ ಸದನ ಆಶ್ರಮದ ಬಾಳು ಶಂಕರ ಕೆರವಾಡಕರ, ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ , ಖಾನಾಪುರ, ಚಂದ್‌ಗಢ, ಹುಬ್ಬಳ್ಳಿ-ಧಾರವಾಡ ಮೊದಲಾದೆಡೆ ಪಾಂಡುರಂಗ ಭಕ್ತರು, ವಾರಕರಿಗಳ ಸಂಖ್ಯೆ ಹೆಚ್ಚಿದೆ. ಕಾರ್ತಿಕ, ಆಷಾಢ ಏಕಾದಶಿಯಂದು ಮಾತ್ರವಲ್ಲದೆ ತಿಂಗಳಿಗೊಮ್ಮೆ ಬರುವ ಏಕಾದಶಿಯಂದು ವಾರಕರಿಗಳು ಪಂಢರಪುರಕ್ಕೆ ಪಾಂಡುರಂಗನ ದರ್ಶನಕ್ಕೆ ತೆರಳುತ್ತಾರೆ. ಆದರೆ ದಿನಕ್ಕೆ ಎರಡು ಬಾರಿ ಹೋಗುತ್ತಿದ್ದ ಬೆಳಗಾವಿ-ಪಂಢರಪುರ ರೈಲು ಮಾರ್ಗವನ್ನು ದುರಸ್ತಿ ಹೆಸರಲ್ಲಿ ಬಂದ್ ಮಾಡಿರುವುದರಿಂದ ನಮಗೆ ಅನಾನುಕೂಲವಾಗಿದೆ. ಹೀಗಾಗಿ ಈ ರೈಲನ್ನು ಮತ್ತೆ ಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದರು

ರಾಜಶೇಖರ್ ಗಣಾಚಾರಿ ಮಾತನಾಡಿ, ಬೆಳಗಾವಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿಯೂ ವಿಠ್ಠಲನ ಭಕ್ತರು, ತುಂಬಾ ಜನಾ ಇದ್ದಾರೆ ಹಾಗಾಗಿ ಬೆಳಗಾವಿ-ಪಂಢರಪುರ ರೈಲು ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಂಚರಿಸುತ್ತಿದ್ದರು. ಈಗ ಈ ರೈಲ್ವೇ ಬಂದ್ ಆಗಿರುವುದರಿಂದ ಅನನುಕೂಲತೆಯಾಗಿದೆ . ಆದ್ದರಿಂದ ಈ ಕೂಡಲೇ ದಿನಕ್ಕೆ ಎರಡು ಬಾರಿ ರೈಲು ಸಂಚಾರ ಆರಂಭಿಸಬೇಕು ಎಂದರು .

ಈ ಸಂದರ್ಭದಲ್ಲಿ ಅಜಿತ ಪಾಟೀಲ, ಉಮೇಶ ದುಕಾರೆ, ಕೂಮಣ್ಣ ಕೋಮನಾಚೆ, ಮಲ್ಲಪ್ಪ ಶಹಾಪುರಕರ, ಮಾರುತಿ ಸಾಂಬ್ರೇಕರ, ಪರಾಶರಾಮ ಅಕ್ನೋಜಿ, ರಾಮ ಲೋಕಲುಚೆ, ಮನೋಹರ ಮೆಲ್ಗೆ, ಕಲ್ಲಪ್ಪ ಪಾಟೀಲ ಸೇರಿದಂತೆ ಬೆಳಗಾವಿ ನಗರ, ಗ್ರಾಮಾಂತರ ವಾರಕರಿ ಭಕ್ತರು ಉಪಸ್ಥಿತರಿದ್ದರು.

Tags: