Uncategorized

ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನಿಡುತ್ತಿರುವ ಪೋಲಿಸರು – ಮಹಿಳೆಯರಿಂದ ಆರೋಪ.

Share

ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಕ್ಷೇತ್ರದ ಕೋಟ ಗ್ರಾಮದಲ್ಲಿ ಪೋಲಿಸರ ಸಹಕಾರದಿಂದ ಆಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಕೋಟ ಗ್ರಾಮದ ಮಹಿಳೆಯರು ಆರೋಪಿಸಿ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ನಾಲ್ಕಾರು ದಿನಸಿ ಅಂಗಡಿಗಳಲ್ಲಿ ಪ್ರತಿ ದಿನ ಸಾವಿರಾರು ರೂಪಾಯಿ ಆಕ್ರಮ ಮದ್ಯ ಮಾರಾಟವಾಗುತ್ತಿದೆ ಇದರಿಂದ ಗ್ರಾಮದ ಯುವಕರು ಕುಡಿತ ಚಟಕ್ಕೆ ಬಿದ್ದು ಆರೋಗ್ಯ ಮತ್ತು ಸಂಸಾರ ಹಾಳು ಮಾಡಿಕೋಳ್ಳುತ್ತಿದ್ದಾರೆ ಈ ಕುರಿತು ಕೋಟ ಬೀಟ ಪೋಲಿಸ್ ಮತ್ತು ಯಮಕನಮರ್ಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದರೆ ಅಂಗಡಿಕಾರರಿಂದ ಹಣ ಪಡೆದು ಬೀಟ್ಟು ಕಳಿಸಿದ್ದಾರೆ ಈ ಕುರಿತು ಕೋಟ ಗ್ರಾಮ ಪಂಚಾಯತಿ ಅದ್ಯಕ್ಷೆ ಲಕ್ಷ್ಮಿ ನಾಯಿಕ ಬೀಟ್ ಪೋಲಿಸ್ ನಾಗನ್ನವರ ಇವರಿಗೆ ಪೋನ್ ಮಾಡಿ ವಿಚಾರಿಸಿದರೆ ನನಗೆ ಗೋತ್ತಿಲ್ಲಾ ಈ ವಿಷಯ ಮಾದ್ಯಮದವರ ಗಮನಕ್ಕೆ ತರಬೇಡಿ ನಾನು ಬಂದು ನಿಮಗೆ ಭೇಟಿ ಯಾಗುತ್ತೆನೆ ಎಂದು ಹೇಳಿದ ಆಡಿಯೋ ಲಭ್ಯವಾಗಿದೆ.

ಪಂಚಾಯತಿ ಅದ್ಯಕ್ಷೆ ಲಕ್ಷ್ಮಿ ನಾಯಿಕ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಗ್ರಾಮದಲ್ಲಿ ಆಕ್ರಮ ಸಾರಾಯಿ ಮಾರಾಟ ಮಾಡದಂತೆ ಕ್ರಮ ಜರುಗಿಸಲು ಮನವಿ ಮಾಡಿದರೂ ಯಾವದೆ ಪ್ರಯೋಜನೆ ಆಗುತ್ತಿಲ್ಲಾ ಕೇಲ ಗ್ರಾಮ ಪಂಚಾಯತಿ ಸದಸ್ಯರೆ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಇದಕ್ಕೆ ಜಾರಕಿಹೋಳಿ ಸಾಹುಕಾರರ ಆಪ್ತ ಸಹಾಯಕರ ಬೆಂಬಲೆ ಇದೆ ಆದರೆ ಇದರಿಂದ ಸಾಹುಕಾರರಿಗೆ ಕೆಟ್ಟ ಹೇಸರು ಬರುತ್ತಿದೆ, ಚುನಾವಣೆ ಸಂಧರ್ಬದಲ್ಲಿ ಓಟ ಕೇಳಲು ಹೋದರೆ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಯುವಕರು ಬೇಕಾ ಬೀಟ್ಟಿ ಸಾರಾಯಿ ಕುಡಿದು ಪ್ರಾಣ ಮತ್ತು ಸಂಸಾರ ಹಾಳು ಮಾಡುತ್ತಿದ್ದಾರೆ ಮೊದಲು ಆಕ್ರಮ ಸಾರಾಯಿ ಮಾರಾಟ ಬಂದ ಮಾಡಿ ಎಂದು ಆರೋಪಿಸುತ್ತಿದ್ದಾರೆ ಬೀಟ್ ಪೋಲಿಸ ನಾಗನ್ನವರ ನಮಗೆ ಪರ್ಸಲ್ ಭೇಟ್ಟಿ ಯಾಗುತ್ತೆನೆ ಸುಮ್ಮನಿರಿ ಎನ್ನುತ್ತಿದ್ದಾರೆ ಎಂದರು

ಮಂಜುಳಾ ನಾಯಿಕ ಮಾತನಾಡಿ ಸಚಿವ ಸತೀಶ ಜಾರಕಿಹೋಳಿಯವರ ಹೇಸರು ಹೇಳಿ ಗ್ರಾಮದಲ್ಲಿ ಶೇರೆ ಮಾರುತ್ತಾರೆ ಮತ್ತು ಅವರ ಪಿ ಎ ಗಳು ಪೋಲಿಸರಿಂದ ಬೀಡಿಸಿ ಮಾರಾಟಕ್ಕೆ ಅನವು ಮಾಡುತ್ತಿದ್ದಾರೆ ಇದರಿಂದಾಗಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳು ಸಹ ಸಾರಾಯಿ ಕುಡಿಯುತ್ತಿದ್ದಾರೆ ಎಂದು ಆರೋಪಿಸಿದರು

ಮತ್ತೋರ್ವ ಮಹಿಳೆ ಪಾರ್ವತಿ ನಾಯಿಕ ಮಾತನಾಡಿ ಸಾರಾಯಿ ಕುಡಿದು ನನ್ನ ಗಂಡನಿಗೆ ಲಕ್ವಾ ಹೋಡೆದಿದೆ ನನಗೆ ಯಾರು ಇಲ್ಲಾ ಅವರನ್ನು ಆರೈಕೆ ಮಾಡಲು ಆಗುತ್ತಿಲ್ಲಾ ಎಂದು ಕಣ್ಣಿರಿಟ್ಟಳು

ಕೋಟ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕೆಲ ಸದಸ್ಯರೆ ಸಾರಾಯಿ ಮಾರಾಟ ಮಾಡುತ್ತಿರುವದು ವಿಷಾಧಕರ ಸಂಗತಿ ಯಾಗಿದೆ ಇದಕ್ಕೆ ರಾಜಕೀಯ ಧುರಿಣರ ಸಹಕಾರ ಮತ್ತು ಬೆಂಬಲದಿಂದಲೆ ಅವ್ಯವಹಿತವಾಗಿ ಸಾರಾಯಿ ದಂಧೆ ನಡೆಯುತ್ತಿದೆ ಎಂದು ಮಹಿಳೆಯರು ಆರೋಪಿಸಿ ಕೆಲ ಕಾಲ ಸಾರಾಯಿ ಬಂದ್ ಮಾಡಿ ನಮ್ಮ ಸಂಸಾರ ಉಳಿಸಿ ಎಂದು ಘೋಷಣೆ ಕೂಗಿದರು.
ಸರಿತಾ ನಾಯಿಕ ಮಾತನಾಡಿ ಮನೆಯಲ್ಲಿಯ ಗಂಡು ಮಕ್ಕಳು ಮತ್ತು ಯಜಮಾನರು ಮನೆಯಲ್ಲಿಯ ದವಸ ಧಾನ್ಯ ಮಾರಿ ಶೇರೆ ಕುಡಿಯುತ್ತಿದ್ದಾರೆ ಮಹಿಳೆಯರು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತೆವೆ ಇದರಿಂದ ನಮಗೆ ಮುಕ್ತಿ ಯಾವಾಗ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು
ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಭಾಗ ವಹಿಸಿ ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.
ಈ ಸಂದರ್ಭದಲ್ಲಿ ಶೋಭಾ ನಾಯಿಕ, ಪ್ರತಿಭಾ ನಾಯಿಕ, ರೇಣುಕಾ ನಾಯಿಕ, ಸುಲೋಚನಾ ನಾಯಿಕ, ಇಂದುಬಾಯಿ ನಾಯಿಕ ಮೊದಲಾದ ನೂರಕ್ಕು ಹೇಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಯವರು ತಮ್ಮ ಸ್ವ ಕ್ಷೇತ್ರದ
ಕೋಟ ಗ್ರಾಮದ ಮಹಿಳೆಯರ ಸಂಕಷ್ಟಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಾಗಿದೆ.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags: