Uncategorized

ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Share

ನಿಮಗೆ ಏನಿದೆ ಅಧಿಕಾರ ಹೊಡೆಯೋಕ್ಕೆ, ಯಾವ ಆಧಾರದ ಮೇಲೆ ಹೊಡೆದೀರಿ, ನಾನೇ ನಿಮಗೆ ನಾಲ್ಕು ಗುದಿದ್ರೆ, ಹೇಗೆ ಹೊಡೆದಿರಿ ನೀವು, ನಾಳೆ ನಾನೇ ಪೋಲಿಸ್ ಠಾಣೆಯ ಮುಂದೆ ಧರಣಿ ಕುಡತ್ತೇನೆ. ಇದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮಾತುಗಳು.

ಇಂದು ತಮ್ಮ ನಿವಾಸಕ್ಕೆ ಧಾರವಾಡದ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ದೀಪಾವಳಿ ಹಬ್ಬದ ಶುಭಾಶಯ ತಿಳಿಸಲು ಆಗಮಿಸಿದ ವೇಳೆಯಲ್ಲಿ ಸಾರ್ವಜನಿಕರು ಇನ್ಸ್ಪೆಕ್ಟರ್ ವಿನಾಕಾರಣ ಹಲ್ಲೆ ಮಾಡತ್ತಾರೆ. ಸುಳ್ಳು ಕೇಸ್ ದಾಖಲಿಸತ್ತಾರೆಂದು ದೂರು ನೀಡಿದ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪೋಲಿಸ್ ಇನ್ಸ್ಪೆಕ್ಟರ್ ಅವರಿಗೆ ತರಾಟೆಗೆ ತೆಗೆದುಕೊಂಡ ಬಗೆ ಇದು.

ನಾವು ಹೋರಾಟದಿಂದ ಅಧಿಕಾರಕ್ಕೆ ಬಂದಿದ್ದೇವೆ. ಇದನ್ನು ನಾವು ಸಹಿಸುವುದಿಲ್ಲ. ಜನರನ್ನು ಕರೆದು ಹೊಡೆಯೋ ಅಧಿಕಾರ ಏನಿದೆ. ತಪ್ಪು ಮಾಡಿದ್ರೆ ಪ್ರಕರಣ ದಾಖಲಿಸಿ ಅದು ಬಿಟ್ಟು ಹೊಡಿಯೋ ಅಧಿಕಾರ ನಿಮಗೆ ಯಾರು ಕೊಟ್ಟಿದ್ದಾರೆ. ಬಿಜೆಪಿಯ ಕೆಲಸ ಮಾಡಿದ್ರೆ ಅವರನ್ನು ಕರೆದು ಹೊಡಿತ್ತೀರಾ? ಪೋಲಿಸ್ ಠಾಣೆಯಲ್ಲಿ ರಾಜಕೀಯ ಮಾಡತ್ತೀರಾ ಎಂದು ಕಿಡಿಕಾರಿದರು.

ಏನ ಆಗುತ್ತೇ ನೋಡೋಣಾ. ಹಳೇ ಕೇಸ್ ಏನಿತ್ತು ಅವರ ಮೇಲೆ. ಬಂದೂಕು ಇತ್ತು ಎಂದು ಹೇಳತ್ತೀರಿ ನಾಳೆ ಬಂದೂಕು ತೋರಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿತ್ತು. ಹೇಗೆ ಕರೆದು ಹಲ್ಲೆ ಮಾಡಿದೀರಿ? ನಿರಪರಾಧಿ ಕರೆದು ಹೊಡೆಯೋದು ಯಾಕೆ, ಸ್ಟೇಷನ್ ಕರೆದು ಹೊಡೆದು ಏನಿದೆ? ನಿಮಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನೆ ಮಾಡಿದರು.

ನೀವು ಕರ್ತವ್ಯದ ಮೇಲೆ ಇದ್ದೀರಿ ನಿಮ್ಮನ್ನು ಹೊಡೆದರೇ ಸರಿ ನಾ ಕಾನೂನು ಪ್ರಕಾರ ಅದಕ್ಕೆ ಅವಕಾಶ ಇದೆ ನಾ? ಈ ಬಗ್ಗೆ ಎಮ್.ಎಲ್.ಸಿ ಮಾಡಿಸಿ ದೂರು ದಾಖಲಿಸತ್ತೇವೆ. ಹೆಚ್ಚಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಜನರ ಮೇಲೆ ಹಲ್ಲೆ ಮಾಡುವುದನ್ನು ವಿರೋಧಿಸಿ ಹೋರಾಟ ಮಾಡತ್ತೇವೆ ಎಂದು ಪ್ರಲ್ಹಾದ್ ಜೋಶಿ ಹರಿಹಾಯ್ದರು.

Tags: