ನವದೆಹಲಿ: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಲೋಕಾರ್ಪಣೆಗೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಅನಾವರಣಗೊಳ್ಳುತ್ತಿವೆ. ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಿಂದ ಹಿಡಿದು ಪ್ರತಿಯೊಂದರ ಹಂತದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಮುಖ ಪಾತ್ರ ವಹಿಸಲಿದ್ದಾರೆ.
ರಾಮ ಮಂದಿರ ಲೋಕಾರ್ಪಣೆ 2024ರ ಜನವರಿ 22 ರಂದು ನೆರವೇರಲಿದೆ. ಈ ವೇಳೆ ಸಹಜವಾಗಿಯೇ ಪ್ರಧಾನಿ ಮೋದಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ವಿಶೇಷ ದಿನಕ್ಕಾಗಿ ಬಹಳಷ್ಟು ತಯಾರಿಗಳನ್ನು ಈಗಾಗಲೇ ನಡೆಸಲಾಗಿದೆ.
ರಾಮಮಂದಿರ ಲೋಕಾರ್ಪಣೆಯಂದು ಏನಿರಲಿದೆ?
ಮಂದಿರಕ್ಕೆ ಮೋದಿ ರಾಮಲಲ್ಲಾ ಮೂರ್ತಿ (Ram Lalla Idol) ಕೊಂಡೊಯ್ಯಲಿದ್ದಾರೆ. ತಾತ್ಕಾಲಿಕ ಮಂದಿರದಿಂದ ರಾಮಮಂದಿರಕ್ಕೆ ಮೆರವಣಿಗೆ ತೆರಳಲಿದೆ. ಪ್ರೋಟೊಕಾಲ್ ನಡುವೆಯೂ 500 ಮೀಟರ್ ಮೋದಿ ಹೆಜ್ಜೆ ಹಾಕಲಿದ್ದಾರೆ. ಗರ್ಭಗುಡಿಯವರೆಗೆ ಮೋದಿ ರಾಮಲಲ್ಲಾ ಮೂರ್ತಿಯನ್ನು ಹೊರಲಿದ್ದಾರೆ.
ಪ್ರಧಾನಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಾಥ್ ನೀಡಲಿದ್ದಾರೆ. ಪ್ರಧಾನಿ ಸಮ್ಮುಖದಲ್ಲಿಯೇ ಪ್ರಾಣಪ್ರತಿಷ್ಠಾಪನೆ ಯಜ್ಞ ನಡೆಯಲಿದೆ. ಜನವರಿ 22ರ ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ಹೋಮ ನಡೆಯಲಿದೆ
Uncategorized
ಅಯೋಧ್ಯೆಯಲ್ಲಿ ‘ರಾಮಲಲ್ಲಾ’ ಮೂರ್ತಿಯನ್ನು ಹೊರಲಿದ್ದಾರೆ ಪ್ರಧಾನಿ ಮೋದಿ
