Uncategorized

ಅಕ್ಟೊಬರ ೧೧ ರಂದು ಬೆಂಗಳೂರಲ್ಲಿ ಅಹೋರಾತ್ರಿ ಧರಣಿ ನಡೆಸಲಿರುವ ಹೊರಗುತ್ತಿಗೆ ನೌಕರರು

Share

ರಾಜ್ಯದ ಸರ್ಕಾರಿ ಹಾಸ್ಟೆಲಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಮೇಲಾಧಿಕಾರಿಗಳಿಂದ ಅದ ಕಿರುಕಿಳವನ್ನು ಖಂಡಿಸಿ ಹೊರಗುತ್ತಿಗೆ ನೌಕರರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು .

ರಾಜ್ಯದ ಸರ್ಕಾರಿ ಹಾಸ್ಟೆಲಗಳಲ್ಲಿ ಸುಮಾರು ೨೩.೦೦೦ಜನ ಸೇವೆ ಸಲ್ಲಿಸುತ್ತಿದ್ದಾರೆ ಆದರೆ ಅವರಿಗೆ ಸರಿಯಾಗಿ ವೇತನ ದೊರಕುತ್ತಿಲ್ಲ ಹೀಗಾಗಿ ಅಕ್ಟೊಬರ ೧೧ ರಂದು ಬೆಂಗಳೂರಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಹೊರಗುತ್ತಿಗೆ ನೌಕರರ ಸಂಘಟನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತು .

ಈ ಸಂದರ್ಭದಲ್ಲಿ ಇನ್ ನ್ಯೂಸ್ ಜೊತೆ ಮಾತನಾಡಿದ ಹೊರಗುತ್ತಿಗೆ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷರಾದ ಭೀಮಶೆಟ್ಟಿ ಎಂಪಳ್ಳಿ ರಾಜ್ಯದ ಸರ್ಕಾರಿ ಹಾಸ್ಟೆಲಗಳಲ್ಲಿ ಸುಮಾರು ೨೩.೦೦೦ಜನ ಸೇವೆ ಸಲ್ಲಿಸುತ್ತಿದ್ದಾರೆ ಆದರೆ ನಿಷ್ಠೆಯಿಂದ ದುಡಿಯುವ ನೌಕರರಿಗೆಲ್ಲ ಮೇಲಾಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದಾರೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ವೇತನ ಕೇಳಿದರೆ ಧಮ್ಕಿ ಹಾಕುತ್ತಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ೨೦೦೦ ಜನ ಹೊರಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಮ್ಯಾನ ಪವರ ಏಜೆನ್ಸಿ ಅವರು ಭ್ರಷ್ಟಾಚಾರದಲ್ಲಿ ತೊಡಗಿ ವೇತನ ಸರಿಯಾಗಿ ನೀಡುತ್ತಿಲ್ಲ ಕಮಿಶನ್ ಪಡೆಯುತ್ತಿದ್ದಾರೆ ,ಅದಕ್ಕಾಗಿ ನಮ್ಮ ಎಲ್ಲಾ ನೌಕರರು ಅಕ್ಟೊಬರ ೧೧ ರಂದು ಬೆಂಗಳೂರಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ ಸುಮಾರು ೨೫೦೦೦ ಜನಾ ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು .

ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಹಾಗು ಬೆಳಗಾವಿ ಜಿಲ್ಲಾಧ್ಯಕ್ಷ ಪ್ರದೀಪ ದಳವಾಯಿ ಸೇರಿದಂತೆ ಹೊರಗುತ್ತಿಗೆ ನೌಕರರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು .

Tags: