Uncategorized

ಉತ್ತಮ ಜೀವನ ಶೈಲಿಯಿಂದ ಆರೋಗ್ಯಪೂರ್ಣ ಜೀವನ ಸಾಗಿಸಬಹುದು ಶೇಖರ್ ದಳವಾಯಿ

Share

ಇವತ್ತಿನ ದಿನಗಳಲ್ಲಿ ವಿಜ್ಞಾನ ಮುಂದೆವರೆದು ನಮ್ಮ ಜೀವನವನ್ನು ಸರಳವಾಗಿದಷ್ಟೇ ರೋಗಗಳು ಮನುಷ್ಯನನ್ನು ಕಾಡುತ್ತಿವೆ. ನಾವು ನಮ್ಮ ಬದುಕಿನಲ್ಲಿ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡಲ್ಲಿ ಆರೋಗ್ಯಪೂರ್ಣ ಜೀವನ ಸಾಗಿಸಬಹುದು ಎಂದು ಶೇಖರ ದಳವಾಯಿ ಹೇಳಿದರು

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವಿವಿಧೆಡೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಳಿತಾಯ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಶೇಖರ ದಳವಾಯಿ ಇವತ್ತಿನ ವೈಜ್ಞಾನಿಕ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿದ್ದು ರೋಗಮುಕ್ತ ಜೀವನ ಸಾಗಿಸಲು ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಆಸ್ಪತ್ರೆಗೆ ಹೋಗುವುದು, ಹೆಚ್ಚಾಗಿ ತರಕಾರಿಗಳನ್ನು ತಿನ್ನುವುದು, ರಾಸಾಯನಿಕಯುಕ್ತ ವಸ್ತುಗಳ ಬಳಕೆಯನ್ನು ಮಾಡದೆ ಇದ್ದ ಖಾಲಿ ಜಾಗದಲ್ಲಿ ಸಾವಯವ ಬೆಳೆ ಬೆಳೆದು ಉಪಯೋಗಿಸಬೇಕು, ನಿತ್ಯ ನಡಿಗೆ,ಯೋಗ, ವ್ಯಾಯಾಮ ಮಾಡುವ ಜೀವನಶೈಲಿಯಿಂದ ಆರೋಗ್ಯಪೂರ್ಣ ಜೀವನ ಸಾಗಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಉಮೇಶ ದೇಶನೂರ, ಈಶ್ವರ ಗಿಣಿಮೂಗೆ, ಶಿವಾನಂದ ಲಖ್ಖನಗಾಂವ, ಮೋಹನ್ ಬುಸಗುಂಡೆ, ಸಂಜೀವ ಬ್ಯಾಕುಡೆ ಹಾಗೂ ಯೋಜನೆ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

Tags: