Uncategorized

ಕುಡಚಿ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಪೊಲೀಸ್ ಹಾಗೂ ಮೀಸಲು ಪಡೆಯಿಂದ ಪಥಸಂಚಲನ

Share

ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ಪೊಲೀಸ್ ಹಾಗೂ ಮೀಸಲು ಪಡೆಯಿಂದ ಪಥಸಂಚಲನ ನಡೆಸಿದರು.

ರಾಯಬಾಗ ತಾಲೂಕಿನ ಕುಡಚಿ ಪಟ್ಟದಲ್ಲಿ ಶನಿವಾರ ಸೆಪ್ಟೆಂಬರ್ 23ರಂದು ಜರುಗುವ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಸಿಪಿಐ ರವಿಚಂದ್ರನ ಬಡಫಕೀರಪ್ಪಗೋಳ, ಪಿಎಸ್ಐ ಮಾಳಪ್ಪ ಪೂಜೇರಿ, ನೇತೃತ್ವದಲ್ಲಿ ಬೃಹತ್ ಪ್ರಮಾಣದ ಪಥಸಂಚಲನ ನಡೆಸಿದರು.
ಗುರುವಾರ ಪಟ್ಟಣದ ಪೊಲೀಸ್ ಠಾಣೆಯಿಂದ ಕರ್ನಾಟಕ ವೃತ್ತ, ರೇಲ್ವೆ ಸ್ಟೇಷನ್, ದೌ ಹೊಟೇಲ್ ಸಿಂಡಿಕೇಟ್ ಬ್ಯಾಂಕ್, ದತ್ತ ಮಂದಿರ, ಮಾಳಿಂಗರಾಯ ಮಂದಿರ ಪ್ರಮುಖ ರಸ್ತೆಗಳ ಮೂಲಕ ಪೊಲೀಸ್ ಸ್ಟೇಶನ್ ವರೆಗೆ ನಡೆದ ಪಥಸಂಚಲನದಲ್ಲಿ ಕರ್ನಾಟಕ ನಾಗರೀಕ ಪೊಲೀಸ್ ಹಾಗೂ ಮೀಸಲು ಪಡೆ ಸಿಬ್ಬಂದಿ ಸೇರಿ ಸುಮಾರು 80ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

ಈ ಸಮಯದಲ್ಲಿ ಸಿಪಿಐ ರವಿಚಂದ್ರನ್ ಬಡಫಕೀರಪ್ಪಗೋಳ, ಕುಡಚಿ ಪಿಎಸ್ಐ ಮಾಳಪ್ಪ ಪೂಜೇರಿ, ತನಿಖಾ ಪಿಎಸ್ಐ ಎಸ್.ಜಿ.ಖೋತ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಚಾಂದಬೀಬಿ ಗಂಗಾವತಿ, ಎಎಸ್ಐ ಕೆ.ಎಸ.ಸಾಳುಂಕೆ, ಅಣ್ಣಪ್ಪ ಮಂಗಸೂಳಿ ಸಿಬ್ಬಂದಿಗಳು ಭಾಗಿಯಾಗಿದ್ದರು.

Tags: