Uncategorized

ನವರಾತ್ರಿಯ ದಾಂಡಿಯಾ ಉತ್ಸವಕ್ಕೆ ಚಾಲನೆ ನೀಡಿದ ನಿವೃತ್ತ ಆರ್.ಸಿ.ಮಹಾಂತೇಶ ಹಿರೇಮಠ.

Share

ವೇಗದ ವೈಜ್ಞಾನಿಕ ಒತ್ತಡದಲ್ಲಿ ಮೂಲ ಸಂಸ್ಕೃತಿಗಳು ಮರೆಯಾಗುತ್ತಿರುವದು ವಿಷಾಧನೀಯ ಎಂದು ಬೆಳಗಾವಿ ನಿವ್ರತ್ತ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಹೇಳಿದರು. ಅವರು ಭಾನುವಾರ ಬೆಳಗಾವಿ ಕಣಬರ್ಗಿ ರಸ್ತೆಯ ರಾಮತೀರ್ಥನಗರ ಎಸ್.ಎಸ್.ಸಂಘದ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಜರುಗಿದ ೯ ದಿನಗಳ ದಸರಾ ದಾಂಡಿಯಾ ಉತ್ಸವಕ್ಕೆ ದೀಪ ಬೆಳಗಿಸಿ, ಕೋಲು ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ. ಪೂರ್ವಜರು ಹಾಕಿ ಕೊಟ್ಟ
ಪ್ರತಿಯೊಂದು ಹಬ್ಬ, ಹರಿದಿನಗಳು ನಮ್ಮ ದುಗುಡ, ದುಮ್ಮಾನಗಳನ್ನು ದೂರ ಸರಿಸಿ, ಹೊಸ ಚೈತನ್ಯ ತುಂಬಬಲ್ಲ ಹರಿತ ಬಾಣಗಳು ಹೌದು. ಒಂದೊಂದು ಹಬ್ಬಗಳು ಒಂದೊಂದು ವಿಶೇಷತೆಗಳಿಂದ ಕೂಡಿವೆ. ಎಲ್ಲ ಹಬ್ಬಗಳಲ್ಲಿ ಸರ್ವ ಶ್ರೇಷ್ಠತೆ ಪಡೆದ ನವರಾತ್ರಿಯ, ಶ್ರೀ ದುರ್ಗಾ ಮಾತೆ ಅವಗುಣಗಳಿಗೆ ಅಂಕುಶವಿಟ್ಟ ಮಹಾ ಮಾತೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ.ಕಲ್ಲೋಳಕರ ಮಾತನಾಡಿ,
ಈ ಹಬ್ಬ ತಾಯಂದಿರ ಹಬ್ಬ. ಮಾತೃ ಸ್ವರೂಪದ ತಾವೆಲ್ಲ ಉತ್ಸುಕರಾಗಿ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿಸಿಕೊಂಡು ,ಕೂಡಿ ಬಾಳುವದರಿಂದಾಗಿ ಸ್ವರ್ಗ ಸುಖ ಹೊಂದಬಹುದಾಗಿದೆ. ಇಂಥ ಶುಭ ಸಂಜೆಯ ಹೊತ್ತಿನಲ್ಲಿ ಆಚರಿಸುವ ನವರಾತ್ರಿಯು ತಮಗೆಲ್ಲ ಸುಖ ಶಾಂತಿ ನೀಡಲಿ ಎಂದು ಶುಭ ಹಾರೈಸಿದರು. ಸಂಘದಿಂದ ಡಿ. ಎಫ್.ಓ ಕಲ್ಲೋಳಕರ ಅವರಿಗೆ ಸನ್ಮಾನಿಸಲಾಯಿತು.
ದೇವಸ್ಥಾನದ ಟ್ರಸ್ಟ ಕಮಿಟಿ ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿದರಲ್ಲದೆ, ಪ್ರಾಸ್ತಾವಿಕ ಮಾತನಾಡಿ, ಸಂಘದ ಕಾರ್ಯ ಚಟುವಟಿಕೆಗಳ ಮತ್ತು ದೇವಸ್ಥಾನ ಅಭಿವ್ರದ್ಧಿ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಡಾ.ಡಿ.ಎನ್.ಮಿಸಾಳೆ, ಜಗದೀಶ ಮಠದ, ಸಂಘದ ನಿರ್ದೇಶಕರು ಮತ್ತು ರಾಜ್ಯ ಹೋಟೆಲ್ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ವಿಲಾಸ ಕೆರೂರ, ಮಾಜಿ ಮಹಾಪೌರ ಎನ್. ಬಿ.ನಿರ್ವಾಣಿ, ಮಹಾದೇವ ಟೊಣ್ಣೆ ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾದೇವಿ ಮಹಿಳಾ ದಾಂಡಿಯಾ ಸಂಘದ ಸದಸ್ಯರು, ಸೇರಿದಂತೆ ಎಸ್.ಎಸ್.ಎಸ್.ಸಂಘದ ಮನೋಹರ ಕಾಜಗಾರ, ಮಹೇಶ ಚಿಟಗಿ, ಡಿ.ಎಂ.ಟೊಣ್ಣೆ, ದುಂಡಪ್ಪಾ ಉಳ್ಳೇಗಡ್ಡಿ, ಎಸ್.ಎಲ್.ಸನದಿ, ಬಸವರಾಜ ಗೌಡಪ್ಪಗೋಳ, ಕಲ್ಲಪ್ಪ ಮಜಲಟ್ಟಿ, ರಾಜೇಂದ್ರ ರತನ,, ಡಾ. ಚವ್ಹಾಣ, ವೇದಮೂರ್ತಿ, ಸಿದ್ದಬಸಯ್ಯಾ ಹಿರೇಮಠ, ಬಸವರಾಜ ಹಿರೇಮಠ ಎಸ್.ಎಂ.ಮೇಲಿನಮನಿ, ದಿಲೀಪ ಟಕ್ಕಳೆ, ಜಿ.ಐ.ದಳವಾಯಿ, ಎನ್ .ಬಿ.ಹಣ್ಣಿಕೇರಿ, ಸೇರಿದಂತೆ ಮಹಿಳೆಯರು, ಹಿರಿಯರು, ಮಕ್ಕಳು ಉಪಸ್ತಿತರಿದ್ದರು. ಕುಮಾರಿ ಪೂರ್ಣಾ ಟೊಣ್ಣೆ ಪ್ರಾರ್ಥಿಸಿದಳು,
ಪ್ರೊ.ಎ.ಕೆ.ಪಾಟೀಲ ನಿರೂಪಿಸಿ ವಂದಿಸಿದರು.
ವರದಿ, ಸುರೇಶ ಉರಬಿನಹಟ್ಟಿ

Tags:

Retired RC Mahanthesha Hiremath inaugurated the Dandiya festival of Navratri.