ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಬೃಹತ್ ಆಕರ್ಷಕ ಪಥಸಂಚಲನ ನಡೆಯಿತು.
ಧಾರವಾಡ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಆವರಣದಿಂದ ಸಾವಿರಾರು ಗಣವೇಷಧಾರಿಗಳು ವಾದ್ಯಗೋಷ್ಠಿ ಜೋತೆಗೆ ಪಥಸಂಚಲನ ಕೈಗೊಂಡ ದೃಶ್ಯಗಳು ಕಂಡುಬಂದವು.
ನಗರದಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಧಾರವಾಡ ನಗರದ ವಿವಿಧೆಡೆ ಆರ್.ಎಸ್.ಎಸ್ ಗಣವೇಷಧಾರಿಗಳು ಶಿಸ್ತಿನಿಂದ ಸಂಚರಿಸಿ ಗಮನ ಸೆಳೆದರು. ಜನರು ಸಹ ಪಥಸಂಚಲನಕ್ಕೆ ಹೂಮಳೆ ಸ್ವಾಗತ ಕೋರಿದರು.