Uncategorized

ಸರ್ವ ಪಾಪನಾಶಕ್ಕಾಗಿ ಶ್ರೀ ವೀರಭದ್ರೇಶ್ವರ ದೇವರಿಗೆ ಬಿಲ್ವಾರ್ಚನೆ

Share

ಚಿಕ್ಕೋಡಿ: ತಿಳಿದು ತಿಳಿಯದೆ ಮಾಡಿದ ಪಾಪಗಳ ನಾಶಕ್ಕಾಗಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರಿಗೆ ನಿಯೋಜಿತ ಧರ್ಮಾಧಿಕಾರಿಗಳಾದ ಶ್ರೀ ರೇಣುಕ ದೇವರಿಂದ, ಮಾಂಜರಿಯ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಹಾಗೂ ಭಕ್ತರಿಂದ ಪಾಠಶಾಲಾ ಮಕ್ಕಳಿಂದ ಬಿಲ್ವಾರ್ಚನೆ ಜರುಗಿತು.

ಚಿಕ್ಕೋಡಿ ತಾಲೂಕಿನ ‌ಸುಕ್ಷೇತ್ರ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ಮಹಾರಥೋತ್ಸವ ಹಾಗೂ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀವೀರಭದ್ರೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವು ನಿಯೋಜಿತ ಧರ್ಮಾರಿಕಾರಿಗಳಾದ ಶ್ರೀ ರೇಣುಕಾ ದೇವರ ಅಧ್ಯಕ್ಷತೆಯಲ್ಲಿ ಜರುಗಿತು.
ಅತ್ಯಂತ ಭಕ್ತಿಭಾವದಿಂದ ಭಕ್ತರಿಂದ,ಪಾಠ ಶಾಲಾ ಮಕ್ಕಳಿಂದ ಬಿಲ್ವಾರ್ಚನೆ ಜರುಗಿತು.ಬಳಿಕ ಭಜನೆ,ಆರತಿ ಕಾರ್ಯಕ್ರಮಗಳು ಜರುಗಿದವು.

ಇದೇ ಸಂಧರ್ಭದಲ್ಲಿ ಶ್ರೀವೀರಭದ್ರೇಶ್ವರ,ಶ್ರೀಕಾಡಸಿದ್ದೇಶ್ವರ ಮಠದ ನಿಯೋಜಿತ ಧರ್ಮಾರಿಕಾರಿಗಳಾದ ಶ್ರೀ ರೇಣುಕಾ ದೇವರು ಮಾತನಾಡಿ ‌ಶ್ರೀಶೈಲ್ ಜದ್ಗರುಗಳು ಡಾ! ಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿಯವರ ಆದೇಶದಂತೆ ಇವತ್ತು ಶ್ರೀವೀರಭದ್ರೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ವೇದಮೂರ್ತಿ ಮಲ್ಲಯ್ಯಾ ಜಡೆ ನೇತೃತ್ವದಲ್ಲಿ ‌ಬಿಲ್ವಾರ್ಚನೆಯು ಸುಂದರವಾಗಿ ಜರುಗಿತು ಎಂದರು.

ಮಾಂಜರಿಯ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ‌ ದೇವರಿಗೆ ಬಿಲ್ವಾರ್ಚನೆ ಅರ್ಪಣೆ ಮಾಡುವುದರಿಂದ ಮೂರು ಜನ್ಮದಲ್ಲಿ ಮಾಡಿರುವ ಪಾಪಗಳು ದೂರವಾಗುತ್ತೆ,ದೇವರಿಗೆ ಪುಪ್ಪ,ಫಲ,ನೀರು ಅತ್ಯಂತ ಪ್ರೀಯವಾದದ್ದು,ಬಿಲ್ವಾರ್ಚನೆ ಅರ್ಪಣೆ ಮಾಡುವುದರಿಂದ‌ ವೈದಿಕ ಸಂಪ್ರದಾಯದ ವಾಡಿಕೆಯಾಗಿದೆ ಎಂದರು.

ಈ ಸಂಧರ್ಭದಲ್ಲಿ ಮಲ್ಲಯ್ಯಾ ಜಡೆ,ಮಹಾಲಿಂಗ ಭ್ರಿಂಗಿ,ಅಣ್ಣಯ್ಯಾ ಪೂಜಾರಿ,ನವೀನ ಹಿರೇಮಠ, ಈರಯ್ಯಾ ಮಠಪತಿ‌,ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಮೂರು ಜನ್ಮದ ಸರ್ವಪಾಪಗಳ ನಾಶಕ್ಕಾಗಿ ಯಡೂರ ಶ್ರೀವೀರಭದ್ರೇಶ್ವರ ದೇವರಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ….

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags: