ಸಂತಿಬಸ್ತವಾಡ ಗ್ರಾಮದ ವಿಟಿಯು ಮುಖ್ಯ ದ್ವಾರದಿಂದ ಸಾರ್ವಜನಿಕರಿಗೆ ಸಂಚರಿಸಲು ಅನೂಕೂಲ ಮಡಿಕೊಡುವಂತೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿದರು
ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿಟಿಯು ಮುಖ್ಯದ್ವಾರದ ರಸ್ತೆಯು ವಿಟಿಯು ಸ್ಥಾಪನೆ ಆಗುವ ಮುಂಚೆ ಸುಮಾರು ನೂರಾರು ವರ್ಷಗಳ ಹಿಂದಿನ ಪೂರ್ವಜರ ಕಾಲದಿಂದಲೂ ಸಂತಿಬಸ್ತವಾಡ ಗ್ರಾಮಕ್ಕೆ ಬೇರೆ ಗ್ರಾಮಕ್ಕೆ ಹೋಗಲು ಬರಲು ಸಾರ್ವಜನಿಕರು ಸಂಚಾರ ರಸ್ತೆಯಾಗಿ ಬಳಸಿಕೊಂಡು ಬಂದಿರುತ್ತಾರೆ. ವಿಟಿಯು ಪ್ರಾರಂಭವಾದ ಮೇಲೆ ಸುಮಾರು 15 ವರ್ಷಗಳ ಕಾಲ ಇದೇ ರಸ್ತೆಯಲ್ಲಿ ಬಸ್ಸಳು ಹಾಗೂ ವಾಹನಗಳು ಸಂಚರಿಸುತ್ತಿವೆ.
ವಿಟಿಯು ಪ್ರಾರಂಭವಾದ ಸುಮಾರು 10 ರಿಂದ 15 ವರ್ಷಗಳ ಕಾಲ ವಾಹನಗಳು ಸಂಚರಿಸುತ್ತಿದರು, ಕೂಡಾ ವಿಟಿಯುಗೆ ಯಾವುದೇ ರೀತಿಯ ತೊಂದರೆಗಳು ಆಗಿರುವುದಿಲ್ಲಾ. ರಾಜ್ಯದ ಮೂಲೆ ಮೂಲೆಯಿಂದ ವಿಟಿಯುಗೆ ಬರುವ ಜನರು ಸಂತಿಬಸ್ತವಾಡ ಬಸ್ಗೆ ಬಂದು ಇಳಿದುಕೊಳ್ಳುತ್ತಿದ್ದರು, ಇದರಿಂದ ರಾಜ್ಯದ ವಿವಿಧ ಕಡೆಯಿಂದ ವಿಟಿಯುಗೆ ಬರುವವರಿಗೆ ಹಾಗೂ ಸಂತಿಬಸ್ತವಾಡಕ್ಕೆ ಹೋಗುವ ಗ್ರಾಮಸ್ಮರಿಗೆ ಬಹಳ ಅನೂಕೂಲ ಆಗುತ್ತಿತ್ತು, ಆದರೆ, ಈ ಸದ್ಯ 4-5 ವರ್ಷಗಳಿಂದ ಈ ರಸ್ತೆಯನ್ನು ಗ್ರಾಮ ಪಂಚಾಯತಿಗೆ ಹಾಗೂ ಗ್ರಾಮಸ್ಥರಿಗೆ ಯಾವುದೇ ರೀತಿ ಮಾಹಿತಿಯನ್ನು ಕೊಡದೇ ಏಕಾಏಕಿಯಾಗಿ ವಿಟಿಯು ಬರುವ ಜನರಿಗೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದೆಂದು ರಸ್ತೆಯನ್ನು ಬಂದ ಮಾಡಿರುತ್ತಾರೆ. ಇದೂವರೆಗೂ ವಿಟಿಯುದವರು ಈ ರಸ್ತೆಯನ್ನು ನಮಗೆ ಓಡಾಡಲು ಬಂದ ಮಾಡಿರುತ್ತಾರೆ. ಇದರಿಂದ ವಿಟಿಯುಗೆ ರಾಜ್ಯದ ವಿವಿಧ ಕಡೆಯಿಂದ ಬರುವವರು ಮತ್ತು ಜಾಂಬೋಟಿ ರಸ್ತೆಯಿಂದ ಸುಮಾರು 1ಕಿ.ಮೀ ವರೆಗೆ ನಡೆದುಕೊಂಡು ಬರುತ್ತಿದ್ದಾರೆ. ಅದೇ ರೀತಿಯಾಗಿ ನಮ್ಮ ಗ್ರಾಮಸ್ಥರು ವಿಟಿಯುದಿಂದ ನಮ್ಮ ಊರಿಗೆ ನಡೆದುಕೊಂಡು ಬರುತ್ತಿದ್ದಾರೆ. ಆದರಿಂದ ನಮ್ಮ ರಸ್ತೆಯನ್ನು ನಮಗೆ ಮುಕ್ತವಾಗಿ ಓಡಾಲು ವಾಹನ ಸಂಚರಿಸಲು ಬಿಟ್ಟುಕೊಡಲು ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಿ ಚೆನ್ನಿಕುಪ್ಪಿ ಉಪಾಧ್ಯಕ್ಷರಾದ ಮಲಪುರಿ ಕಲ್ಲಪ್ಪ ,ಸದಸ್ಯರಾದ ಭರಮ ಗುಡನಕೇರಿ, ವಿಠ್ಠಲ ಅಂಕಲಗಿ ಗ್ರಾಮಸ್ಥರಾದ ಮಹಾದೇವಿ ಚೆನ್ನಿಕುಪ್ಪಿ ,ಮಲ್ಲಿಕಾರ್ಜುನ ರಾಯಶಿಂಗೆ ,ಬಸಪ್ಪಾ ಬೀರಮುತ್ತಿ ,ನಾಗೇಂದ್ರ ನಾಯಿಕ ಅವರು ವಿಟಿಯು ಆಡಳಿತಾಧಿಕಾರಿಯವರಿಗೆ ಭೇಟಿಯಾಗಿ ರಸ್ತೆಯನ್ನು ನಮಗೆ ಓಡಾಡಲು ಹಾಗೂ ವಾಹನಗಳು ಸಂಚರಿಸಲು ಅವಕಾಶ ನೀಡಬೇಕೆಂದು ವಿನಂತಿಸಿಕೊಂಡರು .