Uncategorized

ವಾಲ್ಮೀಕಿ ಪೀಠದ ಶ್ರೀಗಳ ಕುರಿತು ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

Share

ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಮಕ್ಕಳಿದ್ದಾರೆಂಬುದಾಗಿ ಕೆಲವರು ಆರೋಪ ಮಾಡಿದ್ದು, ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಪರೀಕ್ಷೆ ಮಾಡಿಸೋಣ ಎಂಬುದಾಗಿ ವಾಲ್ಮೀಕಿ ಸಮಾಜದ ನಾಯಕ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹರಿಹರ ತಾಲೂಕು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶ್ರೀಮಠ, ಟ್ರಸ್ಟ್‌, ಗುರುಗಳು, ಧರ್ಮದರ್ಶಿಗಳ ವಿರುದ್ಧ ಗೊಂದಲ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ, ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡಲು ಕರೆದಿದ್ದ ಸಮಾಜದ ರಾಜ್ಯಮಟ್ಟದ ಸಭೆಯಲ್ಲಿ ಮಾತನಾಡಿ, ಸ್ವಾಮೀಜಿ ಹಾಗೂ ಆ ಮಕ್ಕಳ ಡಿಎನ್‌ಎ ಪರೀಕ್ಷೆ ಕಾನೂನಾತ್ಮಕವಾಗಿ ಮಾಡಿಸಬೇಕಾ ಅಥವಾ ಖಾಸಗಿಯಾಗಿ ಮಾಡಿಸಬೇಕಾ ಎಂಬ ಬಗ್ಗೆ ಚರ್ಚಿಸೋಣ ಎಂದರು.

Tags:

Satish Jarakiholi's Explosive Statement on Mr. Valmiki Peetha